Belagavi News In Kannada | News Belgaum

ಹಾಲಿನಪುಡಿ ಕದ್ದ ಹೆಡ್​ ಮಾಸ್ಟರ್ ಅಮಾನತು

ಯಾದಗಿರಿ: ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳ ಹಾಲಿನಪುಡಿ ಕದ್ದ ಹೆಡ್ ಮಾಸ್ಟರ್​ವೊಬ್ಬರನ್ನು ಅಮಾನತು ಮಾಡಿರುವ ಘಟನೆ  ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದಲ್ಲಿ ನಡೆದಿದೆ..

 

ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೂರ್ಯಕಾಂತ್ ಅಮಾನತು ಅಗಿರುವ ಹೆಡ್ ಮಾಸ್ಟರ್. ಸೂರ್ಯಕಾಂತ್ ಮಕ್ಕಳಿಗೆ ಕೆನೆಭರಿತ ಹಾಲು ನೀಡದೆ ಕಾಳಸಂತೆಯಲ್ಲಿ ಹಾಲಿನ ಪುಡಿಯ ಪ್ಯಾಕೆಟ್ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ವರದಿ ಬೆನ್ನಲ್ಲೇ ಶಿಕ್ಷಕನನ್ನ ಅಮಾನತ್ತು ಮಾಡಲಾಗಿದೆ ಮಾತ್ರವಲ್ಲದೆ ಶಿಕ್ಷಕನ ಮೇಲೆ ಶಿಕ್ಷಣ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.’

 

ಶಿಕ್ಷಕ ಸೂರ್ಯಕಾಂತ್ ಮೇಲೆ ಕೇಸ್ ದಾಖಲಾಗಿ ವಾರ ಕಳೆದರೂ ಪೊಲೀಸರ ಕೈಗೆ ಸಿಗದೆ ಚಾಲಾಕಿ ಶಿಕ್ಷಕ ತಪ್ಪಿಸಿಕೊಂಡಿದ್ದಾನೆ. ಕೇಸ್ ದಾಖಲಾಗ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಪೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಅತ್ತ ಎಲ್ಲಾ ಮಾಹಿತಿ ಇದ್ದರೂ ಸಹ ಪೊಲೀಸರು ಮುಖ್ಯ ಶಿಕ್ಷಕನನ್ನ ಇನ್ನೂ ಬಂಧಿಸಿಲ್ಲ. ಹಾಲಿನ ಪ್ಯಾಕೇಟ್ ಸಾಗಾಟ ಮಾಡಿದ್ದ ವಾಹನವನ್ನು ಸೀಜ್ ಮಾಡಿಲ್ಲ. ಈಗಾಗಲೇ ಶಿಕ್ಷಕ ಸೂರ್ಯಕಾಂತ್​​ಗೆ ಪೊಲೀಸರು ಎರಡು ನೋಟೀಸ್ ಕೊಟ್ಟಿದ್ದಾರೆ. ಆದರೂ ಶಿಕ್ಷಕನ ಸುಳಿವು ಸಿಗದೇ ಇರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.’