Belagavi News In Kannada | News Belgaum

ಬೆಳಗಾವಿ ಪಾಲಿಕೆ ಆಯುಕ್ತರಾಗಿ ಪಿ.ಎನ್.‌ ಲೋಕೇಶ್ ನೇಮಕ…

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ.ಎನ್. ಲೋಕೇಶ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಾಗಲಕೋಟೆ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಯಾಗಿದ್ದರು. ಈಗ ಅವರನ್ನು ಬೆಳಗಾವಿ ಪಾಲಿಕೆ ಆಯುಕ್ತರಾಗಿ ನೇಮಕ‌ಮಾಡಿ ಆದೇಶ ಹೊರಡಿಸಿದೆ. ಬಹುಶಃ ಒಂದೆರಡು ದಿನದಲ್ಲಿ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ. ಈಗ ಹಂಗಾಮಿ ಆಯುಕ್ತರಾಗಿ ಕಳೆದ ಎರಡು ದಿನಗಳ ಹಿಂದೆ ರಾಜಶ್ರೀ ಜೈನಾಪುರ ಅಧಿಕಾರ ವಹಿಸಿಕೊಂಡಿದ್ದರು.