Belagavi News In Kannada | News Belgaum

ವಾಲಿಬಾಲ್ ಪಂದ್ಯಾವಳಿ: ಹಿಂಡಲ್ಕೊ ಟ್ರೋಪಿ ಮುಡಿಗೇರಿಸಿಕೊಂಡ ಹಿಂಡಲ್ಕೊ ವಾರಿಯರ್ಸ್‌

ಬೆಳಗಾವಿ:   ಹಿಂಡಲ್ಕೊ ಇಂಡಸ್ಟ್ರೀಸ್  ಲಿ. ಆವರಣದಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್‌ಯ ವಾಲಿಬಾಲ್‌  ಟ್ರೋಪಿ ಯಶಸ್ವಿಯಾಗಿ ಜರುಗಿತು.  ವಾಲಿಬಾಲ್  ಪೈನಲ್‌ ಪಂದ್ಯದಲ್ಲಿ   ಹಿಂಡಲ್ಕೊ ವಾರಿಯರ್ಸ್‌ ತಂಡವೂ  ಗೆದ್ದು ಪ್ರಥಮ ಸ್ಥಾನ ಗಳಿಸಿ, ಆಕರ್ಷಕ ಟ್ರೋಪಿ ಮುಡಿಗೇರಿಸಿಕೊಂಡರು. ದ್ವಿತೀಯ ಸ್ಥಾನವನ್ನು ಕಣಬರ್ಗಿ ಬಾಯ್ಸ್‌ ಗಳಿಸಿ  ಟ್ರೋಪಿ ಪಡೆದುಕೊಂಡಿತು.

ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಯಿಂದ ಬೆಳಗಾವಿ ತಾಲೂಕಿನ  7 ದತ್ತು ಗ್ರಾಮಗಳಿಗೆ  ಐದು ದಿನಗಳವರೆಗೆ ವಾಲಿಬಾಲ್ ಪಂದ್ಯಾವಳಿಯ  ಆಯೋಜಿಸಲಾಗಿತ್ತು.  ಹಿಂಡಲ್ಕೊ ವಾರಿಯರ್ಸ್‌  ಮತ್ತು  ಕಣಬರ್ಗಿ ಬಾಯ್ಸ್‌  ತಂಡಗಳು ಪೈನಲ್‌ ಪ್ರವೇಶಿಸಿದವು.  ಆದರೆ,  ಎರಡು ಸುತ್ತಿನ ಆಟದಲ್ಲಿ  ಹಿಂಡಲ್ಕೊ ವಾರಿಯರ್ಸ್‌  ಉತ್ತಮ ಪ್ರದರ್ಶನ ನೀಡಿ ಗೆಲುವು ತಮ್ಮದಾಗಿಸಿಕೊಂಡಿದೆ.

ಹಿಂಡಲ್ಕೊ ವಾರಿಯರ್ಸ್‌ -ಕಣಬರ್ಗಿ ಬಾಯ್ಸ್‌  ಪೈನಲ್‌ ಕದನ:  ಆರಂಭದಲ್ಲಿ ಸಮಬಲ ಹೋರಾಟ ನಡೆಸಿದ ಎರಡು ತಂಡಗಳನ್ನು 9 ಅಂಕಗಳ ಬಳಿಕ ಕಣಬರ್ಗಿ ಬಾಯ್ಸ್‌  ತಂಡದ ಪ್ರದರ್ಶನ ಮಂಕಾಯಿತು. ಇದೇ ಅವಕಾಶವನ್ನು ಬಳಿಸಿಕೊಂಡ  ಹಿಂಡಲ್ಕೊ ವಾರಿಯರ್ಸ್‌ ಚೆಂಡನ್ನು ಬಾನ್ನೆತ್ತರಕ್ಕೆ ಹೊಡೆದು ರೋಚಕ ತಿರುವು ಪಡೆದುಕೊಡಿತ್ತು.  13- 21 ಅಂತರ ದಿಂದ ಹಿಂಡಲ್ಕೊ ಅದ್ಬುತ ಜಯಗಳಿಸಿತ್ತು.  ವಾಲಿಬಾಲ್‌ ಪಂದ್ಯದಲ್ಲಿ 8 ತಂಡಗಳಲ್ಲಿ72  ಕ್ರೀಡಾಪಟುಗಳು ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ವಿಜೇತರಾದ ಕ್ರಿಡಾಪಟುಗಳಿಗೆ ಸಮಾರೋಪದ ಕಾರ್ಯಕ್ರಮದಲ್ಲಿ ಹಿಂಡಲ್ಕೊ ಇಂಡಸ್ಟ್ರೀಸ್  ಲಿ. ಘಟಕ ಮುಖ್ಯಸ್ಥರು ಅಭಜೀತ ಭಂದಿ ಅವರು ಹಾಗೂ ಹಿಂಡಲ್ಕೊ ಇಂಡಸ್ಟ್ರೀಸ್  ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ  ಮಯೂರ ಕೃಷ್ಣ  ಅವರು ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದನೆ ತಿಳಿಸಿದರು.

ಹಿಂಡಲ್ಕೊ ಇಂಡಸ್ಟ್ರೀಸ್  ಲಿ. ಘಟಕ ಮುಖ್ಯಸ್ಥರು ಅಭಜೀತ ಭಂದಿ ಮಾತನಾಡಿ,  ಐದು ದಿನಗಳ ಪಂದ್ಯದಲ್ಲಿ ಕ್ರೀಡಾಪಟುಗಳು ಒಬ್ಬರಿಗೊಬ್ಬರು ಏಕತೆ, ಪ್ರೀತಿ ಮತ್ತು ಗೌರಯುತ್ತವಾಗಿ ಆಟ ಆಡಿದ್ದಾರೆ.  ಗ್ರಾಮಾಂತರ ಮಟ್ಟದಲ್ಲಿ  ಕ್ರೀಡಾಕೂಟವನ್ನು ನಡೆಸಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು.

ಹಿಂಡಲ್ಕೊ ವಾರಿಯರ್ಸ್‌:- ಟಿಮ್ ನಾಯಕ ಸುನೀಲ ಪಾಟೀಲ್, ವಿಶಾಲ ಸಂಜಾಜಿಶೆ,  ರಾಜು ಹಾಲಬಾವಿ, ಸಿದ್ದಪ್ಪ ಬೆಳಗಾವಿ, ಸಂತೋಷ ನಾಯಿಕ, ಕಿರಣ ಬುಡ್ರೇನ್ನವರ,  ಬಸು ಕೊನಕೇರಿ ತಂಡದವರು ಇದ್ದರು.
ಕಣಬರ್ಗಿ ಬಾಯ್ಸ್‌   : ನಾಯಕ ಶ್ರೀನಿವಾಸ ಮಿಸಿ, ಪ್ರಶಾಂತ ಬಡಿಗೇರ, ಪ್ರಕಾಶ ಬನೊಶಿ, ಸುನೀಲ ಶಿಗಿಹಳ್ಳಿ, ರಾಜು ಗಿರಗೌಡರ, ವಿಶಾಲ ಕೊನಕೇರಿ, ಪ್ರಕಾಶ ತಂಡದವರು ಇದ್ದರು.

ಈ ಸಂದರ್ಭದಲ್ಲಿ ಮಯೂರ ಕೃಷ್ಣ, ಕಾರ್ಮಿಕ ವಿಭಾಗದ ಮುಖ್ಯಸ್ಥರು ಮಹೇಶ್ ಶೆಟ್ಟಿ ,  ವಿಜೇಯಶೇಖರ್, ಭರತ , ರಾಕೇಶ ನಾಯ್ಕ, ಶಂಕರ್, ಜಾನ್ ,  ದಿನೇಶ ನಾಯ್ಕ, ಹರ್ಷದಾ ದೇವಳೆ, ಅನೀಲಕುಮಾರ ಚವ್ಹಾನ, ಜಾನ್‌, ಶಂಕರ, ರಾಜು,  ರಾಜು ಮಾನೆ, ಶ್ರೀಧರ ಚಿಕ್ಕಮಠ . ಏಳು ಗ್ರಾಮದ ಗಣ್ಯರು ಹಾಗೂ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಯ ಸಿಬ್ಬಂದಿ ಇತರರು ಇದ್ದರು//////