Belagavi News In Kannada | News Belgaum

ಖಾನಾಪೂರದಲ್ಲಿ ಚಿರತೆ ಮರಿ ಪ್ರತ್ಯಕ್ಷ

ಬೆಳಗಾವಿ: ಚಿರತೆ ಮರಿ ಇರುವುದು ಕಂಡು ಜನ ಭಯ ಭೀತರಾದ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಸಿವಾಡಿ ಗ್ರಾಮದ ಕೃಷಿ ಜಮೀನಿನಲ್ಲಿ ನಡೆದಿದೆ.

ಚಿರತೆ ಮರಿ ಪ್ರತ್ಯಕ್ಷವಾಗಿರುವುದರಿಂದ ತಾಯಿ ಮರಿಯನ್ನು ಹುಡುಕಿಕೊಂಡು ಬರುವ ಶಂಕೆವ್ಯಕ್ತವಾಗಿದ್ದು,  ಹಲಸಿವಾಡಿ ಗ್ರಾಮದ ರೈತರು ಗಾಬರಿಗೊಂಡಿದ್ದಾರೆ. ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದಾಗ ಚಿರತೆ ಮರಿ ಜಮೀನಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾದು ಹೋಗಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಚಿರತೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದಿರಬಹುದು, ಈ ಘಟನೆ ಕುರಿತು ಪರಿಶೀಲಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.//////