Belagavi News In Kannada | News Belgaum

ಖಾನಾಪುರ: ಚಿರತೆ ಮರಿ ಕಂಡು ಭಯ ಭೀತರಾದ ಜನ

ಬೆಳಗಾವಿ: ಚಿರತೆ ಮರಿ ಕಾಣಿಸಿಕೊಂಡಿರುವ ಘಟನೆ ಖಾನಾಪುರ ತಾಲೂಕಿನ ಹಲಸಿವಾಡಿ ಗ್ರಾಮದ ಕೃಷಿ ಜಮೀನಿನಲ್ಲಿ   ಬೆಳಕಿಗೆ ಬಂದಿದೆ..

ದಟ್ಟ ಕಾಡಿನಿಂದ ಕೂಡಿರುವ   ಹಲಸಿವಾಡಿ ಗ್ರಾಮದ ಹಳ್ಳಿಯಲ್ಲಿ ಚಿರತೆ ಮರಿ ಇರುವುದು ಕಂಡು ಬಂದಿದ್ದು, ಜನ ಭಯ ಭೀತರಾಗಿದ್ದಾರೆ.

ಚಿರತೆ ಮರಿ ಪ್ರತ್ಯಕ್ಷವಾಗಿರುವುದರಿಂದ ತಾಯಿ ಮರಿಯನ್ನು ಹುಡುಕಿಕೊಂಡು ಬರುವ ಶಂಕೆ ವ್ಯಕ್ತವಾಗಿದೆ. ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದಾಗ ಚಿರತೆ ಮರಿ ಜಮೀನಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾದುಹೋಗಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಚಿರತೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದಿರಬಹುದು, ಈ ಘಟನೆ ಕುರಿತು ಪರಿಶೀಲಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.