Belagavi News In Kannada | News Belgaum

ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ನೂತನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಮಹತ್ವದ ಕೊಡುಗೆ-ಸಂಸದ ಈರಣ್ಣ ಕಡಾಡಿ

 

ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಕಲಬುರಗಿ, ಬೀದರ ಈ ಎಲ್ಲ ಜಿಲ್ಲೆಗಳಿಗೆ ಸುಮಾರು 376 ಕಿ.ಮೀ ಉದ್ದದ ಮತ್ತು 6975 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದಿನಾಂಕ 22 ಫೆಬ್ರವರಿ 2024 ರಂದು ಗುರುವಾರ ಮಧ್ಯಾಹ್ನ 12.00 ಗಂಟೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ
ಬೆಳಗಾವಿ ನಗರದಲ್ಲಿ 1622.04 ಕೋಟಿ ವೆಚ್ಚದಲ್ಲಿ 34.48 ಕಿಮೀ ಉದ್ದದ 4/6 ಪಥದ ವರ್ತುಲ್ (ರಿಂಗ್) ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 548 ಬಿ ಚಿಕ್ಕೋಡಿ ಬೈಪಾಸ್‌ನಿಂದ -ಗೋಟೂರುವರೆಗೆ 941.61 ಕೋಟಿ ವೆಚ್ಚದಲ್ಲಿ 27.12 ಕಿ.ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ.
ಶಿರಗುಪ್ಪಿಯಿಂದ ಅಂಕಲಿವರೆಗೆ 887.32 ಕೋಟಿ ವೆಚ್ಚದಲ್ಲಿ 10 ಕಿ.ಮೀ ಉದ್ದದ ರಸ್ತೆ ಅಗಲೀಕರಣ.
ಮುರಗುಂಡಿಯಿಂದ ಚಿಕ್ಕೋಡಿ ಹತ್ತಿರವರೆಗೆ 785.79 ಕೋಟಿ ವೆಚ್ಚದಲ್ಲಿ 50.2 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗಲಿದೆ. ಒಟ್ಟು ಬೆಳಗಾವಿ ಜಿಲ್ಲೆಯಲ್ಲಿ 4237.12 ಕೋಟಿ ರೂ ವೆಚ್ಚದ 121.8 ಕಿ.ಮೀ ಉದದ್ದ ರಸ್ತೆಗಳನ್ನು ಒಳಗೊಂಡಿದೆ ಎಂದರು..

ಉತ್ತರ ಕನ್ನಡ ಜಿಲ್ಲೆ
ಅರಬೈಲ್‌ನಿಂದ ಇಡಗುಂಡಿ ವಿಭಾಗದವರೆಗೆ 31.9 ಕೋಟಿ ವೆಚ್ಚದಲ್ಲಿ 16 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ.
ವಿಜಯಪುರ ಜಿಲ್ಲೆ
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ-166ಇ ವಿಜಯಪುರ ಐಬಿ ಸರ್ಕಲ್ ನಿಂದ ಮಹಾರಾಷ್ಟ್ರದ ಮುರ್ರುಮ್ ಗಡಿಯವರೆಗೆ 657.09 ಕೋಟಿ ವೆಚ್ಚದಲ್ಲಿ 102.31 ಕಿ.ಮೀ ಉದ್ದದ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ
ಕನಮಡಿಯಿಂದ ಬಿಜ್ಜೋಡಿ ಮತ್ತು ತಿಕೋಟಾವರೆಗೆ 23.31 ಕಿ.ಮೀ ದ್ವಿಪಥ ರಸ್ತೆಯು ರೂ.196.5 ಕೋಟಿ ಹಣದಲ್ಲಿ ವಿಸ್ತರಣೆಯಾಗಲಿದೆ.
ಬಾಗಲಕೋಟ ಜಿಲ್ಲೆ
ಸರ್ಜಾಪುರದಿಂದ ಪಟ್ಟಣದಕಲ್ಲ ವರೆಗೆ 26 ಕಿ.ಮೀ ಉದ್ದರ ಹೆದ್ದಾರಿ ದ್ವಿಪಥಕ್ಕೆ 340.641 ಕೋಟಿ ವೆಚ್ಚದಲ್ಲಿ ನಿರ್ಮಾಣವಾಲಿದೆ..

ಕೊಪ್ಪಳ ಜಿಲ್ಲೆ
ರಾಷ್ಟ್ರೀಯ ಹೆದ್ದಾರಿ 150 ಎ ಮಸ್ಕಿ & ಸಿಂದೂರು ಬೈಪಾಸ್ 406.73 ಕೋಟಿ ವೆಚ್ಚದಲ್ಲಿ 20.1 ಕಿ.ಮೀ ಉದ್ದದ ಬೈಪಾಸ್ ನಿರ್ಮಾಣವಾಗಲಿದೆ ಹಾಗೂ 146.64 ಕೋಟಿ ವೆಚ್ಚದಲ್ಲಿ 13.8 ಕಿ.ಮೀ ಉದ್ದದ ವೆಂಕಟೇಶ್ವರ ಕ್ಯಾಂಪ್ ನಿಂದ ದಡೇಸುಗೂರು ಕ್ಯಾಂಪ್‌ವರೆಗೆ ದ್ವಿಪಥ ರಸ್ತೆ ಅಗಲೀಕರಣ.
ರಾಷ್ಟಿçÃಯ ಹೆದ್ದಾರಿ 367ರಲ್ಲಿ ಭಾನಾಪುರ-ಗದ್ದನಕೇರಿ ವಿಭಾಗದ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡದಲ್ಲಿ 253.75 ಕೋಟಿ ವೆಚ್ಚದಲ್ಲಿ 17.3 ಕಿ.ಮೀ ಉದ್ದದ ಬೈಪಾಸ್ ನಿರ್ಮಾಣವಾಗಲಿದೆ..

ರಾಯಚೂರ ಜಿಲ್ಲೆ
ಯಾದಗಿರಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ 150ರ 8.75 ಕಿ.ಮೀ ಉದ್ದದ 136.29 ಕೋಟಿ ವೆಚ್ಚದಲ್ಲಿ ಬೈಪಾಸ್ ನಿರ್ಮಾಣವಾಗಲಿದೆ.
ಬೀದರ ಜಿಲ್ಲೆ
ಚಿಂಚೋಳಿಯಿಂದ ತೆಲಂಗಾಣದ ಗಡಿ ಮಿರಿಯಾಣ ತನಕ 405.3 ಕೋಟಿ ವೆಚ್ಚದಲ್ಲಿ 15.8 ಕಿ. ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
ಕಲಬುರಗಿ ಜಿಲ್ಲೆ
125.15 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 150ಇ ವ್ಯಾಪ್ತಿಯ ಚೌಡಾಪುರ ಗ್ರಾಮ, ಅಫಜಲಪುರ ಪಟ್ಟಣ ಮತ್ತು ಬಲ್ಲೂರ್ಗಿ ಗ್ರಾಮದಿಂದ 7.73 ಕಿ.ಮೀ ಉದ್ದದ ಧ್ವಿಪಥ ರಸ್ತೆಗೆ ಮರು ಜೋಡಣೆ ಕಾಮಗಾರಿ..

ಈ ಎಲ್ಲ ರಸ್ತೆಗಳ ಶಂಕು ಸ್ಥಾಪನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಯಲ್ಲಿ ನೇರವೇರಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕಾರ್ಯವನ್ನು ಮುಕ್ತಕಂಠದಿAದ ಪ್ರಶಂಸಿದ್ದಾರೆ.