Belagavi News In Kannada | News Belgaum

ವಚನ ಕಂಠಪಾಠ ಸ್ಪರ್ಧೆ

ಬೆಳಗಾವಿ ದಿನಾಂಕ 19– ವಚನಗಳು ಮನುಷ್ಯರಲ್ಲಿ ನೈತಿಕ ಶಕ್ತಿಯನ್ನು ನಿಜ ಭಕ್ತಿಯನ್ನು ವೃದ್ಧಿಸುತ್ತವೆ. ವಚನ ಎಂದರೆ ಭಾμÉ ಅಥವಾ ಭರವಸೆ ಕೊಟ್ಟಂತೆ, (Promise) D ಆ ಶಕ್ತಿ ವಚನಗಳಿಗೆ ಇದೆ. ನುಡಿದಂತೆ ನಡೆಯುವ ಮನಸ್ಥಿತಿ ದೃಡವಾಗುತ್ತದೆ. ಒಂಬತ್ತನೂರು ವರ್ಷಗಳ ಹಿಂದೆ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ಮಾರ್ಗದರ್ಶನದಲ್ಲಿ ಕಾಯಕ ವರ್ಗದ ಎಲ್ಲ ಪಂಗಡದವರು ಅನುಭವ ಮಂಟಪದಲ್ಲಿ ಕನ್ನಡ ಅಕ್ಷರಗಳನ್ನು ಕಲಿತು ಮಾನವ ಸಮಾಜಕ್ಕೆ ದಾರಿ ತೋರುವ ವಚನ ಸಾಹಿತ್ಯವನ್ನು ಕೊಟ್ಟಿದ್ದಾರೆ ಎ0ದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶರಣ ಬಸವರಾಜ ರೊಟ್ಟಿ ಅವರು ಹೇಳಿದರು.
ಜಾಗತಿಕ ಲಿಂಗಾಯತ ಮಹಾ ಸಭಾದ ಮಹಾನಗರ ಹಾಗೂ ಬೆಳಗಾವಿ ತಾಲೂಕ ಘಟಕದ ವತಿಯಿಂದ ದಿನಾಂಕ 18- 2 – 2024 ರಂದು ನಗರದಲ್ಲಿ ಜರುಗಿದ ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕ ಘಟಕದ ಅಧ್ಯಕ್ಷರಾದ ಶರಣ ಬಿ.ಜಿ ವಾಲಿಇಟಗಿ ಹಾಗೂ ನಗರ ಮಹಿಳಾ ಘಟಕದ ಗೌರವಾಧ್ಯಕ್ಷೆ ಶರಣೆ ಮಹಾನಂದಾ ಪರುಶೆಟ್ಟಿ ಮಾತನಾಡಿದರು.
ಪ್ರಾರಂಭದಲ್ಲಿ ಬೆಳಗಾವಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಶರಣ ಸಿ.ಎಂ ಬೂದಿಹಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾರಿ ಗುರು ಬಸವ ಬಳಗದ ಶರಣ ಮಹಾಂತೇಶ ತೋರಣಗಟ್ಟಿ ವಚನ ಕಂಠಪಾಠ ಸ್ಪರ್ಧೆಯ ನಿಯಮಗಳನ್ನು ಹಾಗೂ ನಿರ್ಣಾಯಕರ ಕಾರ್ಯವಿಧಾನಗಳ ಬಗ್ಗೆ ವಿವರಿಸಿದರು. ಪೆÇ್ರೀ ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಪಧಾಧಿಕಾರಿಗಳು ಹಾಗೂ ಸಂಚಾರಿ ಗುರು ಬಸವ ಬಳಗದ ಪಧಾದಿಕಾರಿಗಳು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ಹೆಚ್ಚು ವಚನಗಳನ್ನು ಹೇಳಿದ ಕುಮಾರಿ ಪ್ರಯುಕ್ತಾ ಜಗದೀಶ ಯವಕನಮರಡಿ ಪ್ರಥಮ ಸ್ಥಾನ, ಕುಮಾರಿ ಸ್ವಾತಿ ಬಾಬುರಾವ್ ಪಾಟೀಲ ದ್ವಿತಿಯ ಸ್ಥಾನ, ಹಾಗೂ ಶ್ರವಣಕುಮಾರ ಕಲ್ಲಪ್ಪ ದೇವರಮನಿ ತೃತಿಯ ಸ್ಥಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪ್ರಮಾಣ ಪತ್ರ ನೀಡಲಾಯಿತು.