Belagavi News In Kannada | News Belgaum

ಕೊಲೆ ಪ್ರಕರಣಕ್ಕೆ ರೋಚಕ ತಿರುವು : ಆರೋಪಿ ಬಂಧನ

ಮಂಡ್ಯ:  ಭಾರೀ ಕುತೂಹಲ ಕೆರಳಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ವಿವಾಹಿತ ಶಿಕ್ಷಕಿ ದೀಪಿಕಾ (21) ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಪ್ರಮುಖವಾಗಿ ಬೇಕಾಗಿದ್ದ ನಿತೀಶ್ (21) ಎಂಬಾತನನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ..

 

ಈತನ ಮೇಲೆ ದೀಪಿಕಾರವರ ಕೊಲೆ ಆರೋಪ ಕೇಳಿಬಂದಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಂಧಿಸಿದ್ದಾರೆ.

ದೀಪಿಕಾರವರ ಕೊಲೆಯಾಗಿ ಎರಡು ದಿನಗಳ ನಂತರ ಅವರ ಶವ ಪೊಲೀಸರಿಗೆ ಸಿಕ್ಕಿತ್ತು. ಇತ್ತ, ಅದೇ ದಿನ ನಿತೀಶ್ ಗ್ರಾಮದಿಂದ ನಾಪತ್ತೆಯಾಗಿದ್ದ. ದೀಪಿಕಾರಿಗೆ ಕೆಲವಾರು ವರ್ಷಗಳಿಂದ ಪರಿಚಯವಾಗಿದ್ದರಿಂದ ಈತನ ಮೇಲೆ ಅನುಮಾನಗಳು ಬಂದಿದ್ದವು..

ನಾಪತ್ತೆಯಾಗುವ ಮೊದಲು ನಾಟಕವಾಡಿದ್ದ ಆತ, ದೀಪಿಕಾ ನಾಪತ್ತೆಯಾಗಿ ಆಕೆಯ ಶವ ಪತ್ತೆಯಾದ ನಡುವಿನ 2 ದಿನದಲ್ಲಿ ಒಮ್ಮೆ ದೀಪಿಕಾರ ತಂದೆಗೆ ಫೋನ್ ಮಾಡಿದ್ದ, ‘ಅಕ್ಕ ಪತ್ತೆಯಾದರಾ’ ಎಂದು ಕೇಳಿ, ಸಂತಾಪ ಸೂಚಿಸುವ ನಾಟಕವಾಡಿದ್ದ ಎಂದು ಹೇಳಲಾಗಿದೆ.