Belagavi News In Kannada | News Belgaum

ವಿವಿಧ ಬೇಡಿಕೆ  ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರಿಂದ ಮನವಿ

 

ಬೆಳಗಾವಿ: ಸಾರಿಗೆ ನೌಕರರ ವೇತನ ಪರಿಷ್ಕರಣೆ  ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಹುಬ್ಬಳ್ಳಿಯ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಇಲ್ಲಿನ  ಸಾರಿಗೆ ನೌಕರರು ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿವರೆಗೂ ತೆರಳಿ ಗುರುವಾರ ಮನವಿ ಸಲ್ಲಿಸಿದರು. ಬೆಲೆ ಏರಿಕೆಯಿಂದ ತತ್ತರಿಸಿರುವ  ರಾಜ್ಯದ ಜನತೆಗೆ  ಸರ್ಕಾರ ಐತಿಹಾಸಿಕ 5 ಗ್ಯಾರೆಂಟಿಗಳಿಂದ ನೆಮ್ಮದಿಯಿಂದ ಜೀವನ ಸಾಗಸುತ್ತಿದ್ದಾರೆ. ಸರ್ಕಾರ ನಿರ್ಧಾರಕ್ಕೆ  ಅಭಿನಂದನೆ  ಸಲ್ಲಿಸುತ್ತೇವೆ.

5 ಗ್ಯಾರೆಂಟಿಗಳ ಪೈಕಿ “ಶಕ್ತಿ ಯೋಜನೆ”  ಯನ್ನು ಪ್ರಪ್ರಥಮವಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಅನುಷ್ಠಾನಗೊಳಿಸಿರುವುದು ಅತ್ಯಂತ  ಹೆಮ್ಮೆಯ ವಿಷಯವಾಗಿದೆ.

ಆದರೆ,  ಡಿಸೇಲ್, ಆಯಿಲ್, ಟಾಯರ್ ಹಾಗೂ ಇತರೆ ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿವೆ.  ಹೀಗಾಗಿ ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಬಲ ಪಡಿಸಲು ಹಾಗೂ ರಾಜ್ಯದ ಜನತೆಗೆ  ಇನ್ನೂ ಉತ್ತಮವಾದ ಸಾರಿಗೆ ಸೇವೆ ನೀಡಲು ನೌಕರರ ಬೇಡಿಕೆಗೆ ಸರ್ಕಾರ ಶೀಘ್ರವೇ ಸ್ಪಂಧಿಸಬೇಕು ಎಂದು ಮನವಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ಸಾರಿಗೆ ನೌಕರರಿಗೆ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ 2020ರ ಜನವರಿಯಿಂದ ವೇತನ ಪರಿಷ್ಕರಣೆ ಮಾಡಬೇಕಾಗಿದ್ದು, ಇದುವರೆಗೆ ಮಾಡಿಲ್ಲ ಎಂದು ಮನವಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಗೊಳಿಸುವ ಬಗ್ಗೆ ಪ್ರಕ್ರಿಯೆ ಆರಂಭಗೊಂಡಿದೆ. ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹಾಗೂ ಸಾರಿಗೆ ಸಂಸ್ಥೆ ನೌಕರರ ಮೂಲ ವೇತನದಲ್ಲಿ ಬಹಳ ವ್ಯತ್ಯಾಸವಿದೆ. ಇದರಿಂದಾಗಿ ನೌಕರರು ತಾರತಮ್ಯ ಅನುಭವಿಸುವಂತಾಗಿದೆ. ಅಗತ್ಯ ಸೇವೆಯ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯ ನೌಕರರಿಗೆ ಸರ್ಕಾರಿ ನೌಕರರ ವೇತನಕ್ಕೆ ಸರಿಸಮಾನವಾಗಿ ವೇತನವನ್ನು ಪರಿಷ್ಕರಿಸುವಂತೆ ಆಗ್ರಹಿಸಿದರು.

ಸರ್ಕಾರ ಶೀಘ್ರವೇ    ಶಕ್ತಿ ಯೋಜನೆ ಸಂಪೂರ್ಣ ಅನುದಾನ ಕೂಡಲೇ ಸಾರಿಗೆ ನಿಗಮಗಳಿಗೆ ಪಾವತಿಸಬೇಕು. 2020 ರಿಂದ  2023 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ  ವೇತನ  ಪರಿಷ್ಕರಣೆ ಅಳವಡಿಸಿ ಕೂಡಲೇ ನಿವೃತ್ತಿ ಸೌಲಭ್ಯಗಳ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

 

 

ಈ ಸಂದರ್ಭದಲ್ಲಿ  ಗೌರವಾಧ್ಯಕ್ಷರು ನಾಗೇಶ ಸಾತೇರಿ ,  ಪ್ರಧಾನ ಕಾರ್ಯದರ್ಶಿ ಸುರೇಶ ವ್ಹಿ ಯರಡ್ಡಿ  ,ಪ್ರಧಾನಕಾರ್ಯದರ್ಶಿ ಗೋಪಾಲ ಲಮಾಣಿ, ಸಾರಿಗೆ  ಸಿಬ್ಬಂದಿಗಳು   ಹಾಗೂ       ಕರಾರಸಾಸಂಸ್ಥೆ/ಪಪಂ ಹಾಗೂ    ಆಂಡ್ ವರ್ಕರ್ಸ ಯುನಿಯನ್      ನೌಕರರ ಸಂಘ, ಗಿರೀಶ ಕಾಂಬಳೆ ,  ಪ್ರಕಾಶ ಸಿದ್ನಾಳ,  ಉಮೇಶ, ಈರಣ್ಣಾ ಸಂಬರಗಿ , ನಾಗರಾಜ ಕಾಡೇಶನವರ , ಶಿವಪ್ಪಾ ದಳವಾಯಿ ಹಾಗೂ ಇತರರು ಇದ್ದರು.