Belagavi News In Kannada | News Belgaum

ಇನ್ಮೊಂದೆ ಆಸ್ತಿ ಖರೀದಿಗೆ ಪೊಲೀಸರಿಗೆ ಪರ್ವಿುಟ್ ಕಡ್ಡಾಯ…

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ, ಬಿ ಮತ್ತು ಸಿ ದರ್ಜೆಯ (ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಿರ-ಚರಾಸ್ತಿಯನ್ನು ಖರೀದಿಸಲು, ಮಾರಾಟ ಮಾಡಲು ಹಾಗೂ ಉಡುಗೊರೆ ರೂಪದಲ್ಲಿ ಪಡೆಯುವ ಮುನ್ನ ಪ್ರಾಧಿಕಾರದಿಂದ ಅನುಮತಿ ಪಡೆಯುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿರುವ ರಾಜ್ಯ ಪೊಲೀಸ್ ಇಲಾಖೆ, ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ದಾಖಲಾತಿಗಳನ್ನು ಸಲ್ಲಿಸಲು ಆದೇಶಿಸಿದೆ..

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 24 ಅನ್ವಯ ಚರಾಸ್ತಿ, ಸ್ಥಿರಾಸ್ತಿ ಮತ್ತು ಬೆಲೆಬಾಳುವ ಸ್ವತ್ತು ಉಪ ನಿಯಮ (3) ಪ್ರಕಾರ ಸರ್ಕಾರಿ ನೌಕರ ಅಥವಾ ಆತನ ಕುಟುಂಬ ಸದಸ್ಯರ ಹೆಸರಲ್ಲಿ ಆಸ್ತಿ ಖರೀದಿಸುವ ಮೊದಲೇ ಪ್ರಾಧಿಕಾರಕ್ಕೆ ತಿಳಿಸಬೇಕು. ಪ್ರಾಧಿಕಾರದ ಗಮನಕ್ಕಿಲ್ಲದೆ ಗುತ್ತಿಗೆ, ಅಡಮಾನ, ಖರೀದಿ, ಮಾರಾಟ, ಉಡುಗೊರೆ ಮೂಲಕ ಪಡೆಯಲು ಅವಕಾಶ ಇಲ್ಲ. ಒಂದು ವೇಳೆ ಪ್ರಾಧಿಕಾರಕ್ಕೆ ತಿಳಿಸದೆ ಇಂತಹ ವ್ಯವಹಾರ ಮಾಡಿದ್ದಲ್ಲಿ 2 ತಿಂಗಳ ಒಳಗಾಗಿ ಪೂರಕ ದಾಖಲಾತಿಗಳು ಹಾಗೂ ಸಮರ್ಥನೀಯ ಕಾರಣಗಳೊಂದಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ಸ್ಪಷ್ಟಪಡಿಸಿದೆ..

ಒಂದು ವೇಳೆ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೆ ಆಸ್ತಿ ಖರೀದಿ ಅಥವಾ ಮಾರಾಟ ಮಾಡಿದ್ದರೆ 2 ತಿಂಗಳ ಒಳಗಾಗಿಯೂ ವರದಿ ಮಾಡದಿದ್ದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೆಎಸ್​ಪಿ (ನಡತೆ) ನಿಯಮಗಳನ್ನು ಉಲ್ಲಂಘನೆ ಆರೋಪದಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಹೊರಡಿಸಿರುವ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ..

ಮನೆ ಕಟ್ಟಲು ದಾಖಲೆಗಳೇನು? ಗೃಹ ನಿರ್ವಣಕ್ಕೆ ಇಚ್ಛಿಸಿರುವ ನಿವೇಶನ ಖರೀದಿಸಲು ಇಲಾಖಾ ಅನುಮತಿ ಪತ್ರ,   ತಗಲುವ ವೆಚ್ಚದ ಬಗ್ಗೆ ಇಂಜಿನಿಯರ್ ಅವರಿಂದ ಪಡೆದ ಅಂದಾಜು ವೆಚ್ಚದ ಪಟ್ಟಿ,  ಮನೆ ಕಟ್ಟುವ ವೆಚ್ಚವನ್ನು ಯಾವ ಮೂಲದಿಂದ ಭರಿಸಲಾಗುತ್ತದೆ ಎಂಬ ದಾಖಲೆ,  ಖರೀದಿ, ಗಿಫ್ಟ್ ಪಡೆಯಲು ದಾಖಲೆಗಳು, ಆಸ್ತಿ ಮೌಲ್ಯ, ದರ ನಿಗದಿ ಪತ್ರ, ನೋಂದಣಿ ಶುಲ್ಕದ ವಿವರ ಹಾಗೂ ವಿಳಾಸ , ಮಾರಾಟಗಾರರಿಗೂ ಖರೀದಿದಾರರಿಗೂ ಸರ್ಕಾರಿ ವ್ಯವಹಾರ ಇಲ್ಲವೆಂದು ಖರೀದಿದಾರ/ಸರ್ಕಾರಿ ಅಧಿಕಾರಿ ನೀಡಿರುವ ದೃಢೀಕರಣ ಪತ್ರ, ಬ್ಯಾಂಕ್ ಸಾಲವಾಗಿದ್ದಲ್ಲಿ ಅದರ ಮೊತ್ತ, ಇಎಂಐ ವಿವರಗಳು,  ಉಡುಗೊರೆ ಮೂಲಕ ಪಡೆಯಲು ಉದ್ದೇಶಿಸಿರುವ ಜಮೀನು ಸದ್ಯ ಯಾರ ಹೆಸರಿನಲ್ಲಿದೆ ಎಂಬ ವಿವರ, ಉಡುಗೊರೆ ನೀಡುತ್ತಿರುವವರ ವಿವರ, ಐಟಿಆರ್ ದಾಖಲೆ ನೀಡಬೇಕು.