Belagavi News In Kannada | News Belgaum

ಫೆ. 26ಕ್ಕೆ ಬೆಳಗಾಂ ಶುಗರ್ಸ್‌ನ ಕಬ್ಬು ನುರಿಸು ಕಾರ್ಯ ಮುಕ್ತಾಯ

 

ಬೆಳಗಾವಿ: ಪ್ರಸ್ತುತ 2023-24ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಫೆ. 26 ಸಂಜೆ 6:00 ಘಂಟೆಗೆ ಮುಕ್ತಾಯಗೊಳಿಸಲು ಬೆಳಗಾಂ ಶುಗರ್ಸ್‌ ಸಕ್ಕರೆ ಕಾರ್ಖಾನೆ ನಿರ್ಧರಿಸಿದೆ.
2023-24ನೇ ಕಬ್ಬು ನುರಿಸುವ ಹಂಗಾಮಿಗಾಗಿ ಕಬ್ಬನ್ನು ನೋಂದಣಿ ಮಾಡಿದ ಕಾರ್ಯಕ್ಷೇತ್ರದ ಎಲ್ಲಾ ರೈತರು ಕಾರ್ಖಾನೆಯ ಕ್ಷೇತ್ರ ಸಿಬ್ಬಂದಿಗಳನ್ನು ಸಂಪರ್ಕಿಸಿ ಕಬ್ಬನ್ನು ಕಟಾವು ಮಾಡಿ ತಮ್ಮ ಸ್ವಂತ ವಾಹನದಿಂದ ಅಥವಾ ಕರಾರು ಮಾಡಲಾದ ವಾಹನ ಹಾಗೂ ಗ್ಯಾಂಗಳ ಮೂಲಕ ಫೆ. 26 ಸಂಜೆ 6:00 ಘಂಟೆಯ ಒಳಗಾಗಿ ಕಾರ್ಖಾನೆಗೆ ಪೂರೈಕೆ ಮಾಡಬೇಕೆಂದು ಕಾರ್ಖಾನೆ ಆಡಳಿತ ಮಂಡಳಿ ವಿನಂತಿಸಿದೆ. ಸದರಿ ದಿನಾಂಕದೊಳಗೆ ಕಾರ್ಖಾನೆಗೆ ಪೂರೈಕೆಯಾಗದೆ ಉಳಿದ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿ ಆಗಿರುವುದಿಲ್ಲ ಎಂದು ತಿಳಿಸಿದೆ.

ಪ್ರಸಕ್ತ 2023-24 ನೇ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಮಸ್ತ ರೈತ ಬಾಂಧವರಿಗೆ, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಕ್ತೆದಾರರಿಗೆ ಮತ್ತು ಕಾರ್ಖಾನೆಯ ಎಲ್ಲ ಅಧಿಕಾರಿಗಳಿಗೆ, ಕಾರ್ಮಿಕ ಮತ್ತು ಸಿಬ್ಬಂದಿ ವರ್ಗದವರಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿಯ ಸಹಾಯ ಸಹಕಾರವನ್ನು ಮುಂಬರುವ ಹಂಗಾಮುಗಳಲ್ಲಿಯೂ ಕೂಡಾ ನೀಡುವಿರೆಂದು ಆಶಿಸುತ್ತೇವೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.