Belagavi News In Kannada | News Belgaum

ಸಾರಥಿ ನಗರದಲ್ಲಿ 2023 24ರ ವಾರ್ಷಿಕ ಸ್ನೇಹ ಸಮ್ಮೇಳನ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದಾ ವಾರ್ಷಿಕ ಸ್ನೆಹ ಸಮ್ಮೇಳನ

ಬೆಳಗಾವಿ: 2023 24ರ ವಾರ್ಷಿಕ ಸ್ನೇಹ ಸಮ್ಮೇಳನ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದಾ ವಾರ್ಷಿಕ ಸ್ನೆಹ ಸಮ್ಮೇಳನ 2023 24 ಕಾರ್ಯಕ್ರಮವನ್ನು
ನಗರದ ಸಾರಥಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಬ್ಬಳ್ಳಿಯವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ನಗರದ ಶಾಲೆಯ ೆಚ್‌ಡಿಎಫ್ಸಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.
ಅಧ್ಯಕ್ಷ ವಹಿಸಿದ ಹೆಬ್ಬಳ್ಳಿ ಅವರು ಮಾತನಾಡಿ ಖಾಸಗಿ ಶಾಲೆಗೆ ಕಳಿಸುವ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಇಲ್ಲಿ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಆ ಕೆಲಸವನ್ನು ಮುಖ್ಯ ಶಿಕ್ಷಕರಾದ ರಾಜು ಕಲಿಕಾರ್ ರವರು ವಹಿಸುವರು ವಿಶ್ವಾಸ ನನಗಿದೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಇಲಾಖೆಯಿಂದ ಆಗಮಿಸಿದ ಹಿರೇಮಠ ಅವರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರೇಮಠ ಸಾರ್ತಿ ನಗರ ಶಾಲೆಯನ್ನು ಖಾಸಗಿ ಮನೆ ಬಾಡಿಗೆ ಪಡೆದುಕೊಂಡು ನಡೆಸುತ್ತಿದ್ದು ಬರುವಂತ ದಿನದಲ್ಲಿ ಸರಕಾರಿ ಶಾಲೆಗೆ ಸ್ಥಳೀಯ ಶಾಸಕರು 10 ಗುಂಟೆ ಜಾಗವನ್ನು ಸ್ಥಳ ಗುರುತಿಸಿ ಮಂಜೂರು ಮಾಡಿದರೆ ಅದಕ್ಕೆ ಕಟ್ಟಡ ಅನುದಾನವನ್ನ ಶಿಕ್ಷಣ ಇಲಾಖೆಯಿಂದ ನಾವು ಬಿಡುಗಡೆ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡುತ್ತೇವೆ ನಮಗೆ ನಗರದ ವ್ಯಾಪ್ತಿಯಲ್ಲಿರುವುದರಿಂದ ಕಟ್ಟಡಕ್ಕೆ ಜಾಗ ಸಿಗದ ಕಾರಣಕ್ಕಾಗಿ ಶಾಲೆಯು ಇಲ್ಲಿವರೆಗೆ ಆಗಿರುವುದಿಲ್ಲ ಜಾಗ ನೀಡಿದಲ್ಲಿ ಶಾಲೆ ನಿರ್ಮಾಣ ಮಾಡುವ ಕಾರ್ಯವನ್ನು ನಿರ್ವಹಿಸುತ್ತೇವೆ ಸರ್ಕಾರಿ ಶಾಲೆಯಲ್ಲಿ ನಗರದ ಮಕ್ಕಳು ಓದಲು ಅವಕಾಶವನ್ನ ಕಲ್ಪಿಸಲು ಪ್ರಯತ್ನಿಸುವೆ ಎಂದು ಹಿರೇಮಠ ಹೇಳಿದರು.
ಈ ಕಾರ್ಯಕ್ರಮದಲ್ಲಿ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಓದಿರುವ ವಿದ್ಯಾರ್ಥಿಗಳು ಕೆಲವು ಕಲಾ ಪ್ರದರ್ಶನಗಳನ್ನ ಸ್ಪರ್ಧಿಸಿದರು ಈ ಕಾರ್ಯಕ್ರಮದಲ್ಲಿ ನಗರದ ಹಿರಿಯರು ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತರಿದ್ದರು