Belagavi News In Kannada | News Belgaum

ಪ.ಪಂ ಯುವಕ ಯುವತಿಯರಿಗೆ ವಿವಿಧ ಕೌಶಲ್ಯಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಪ.ಪಂ ಯುವಕ ಯುವತಿಯರಿಗೆ ವಿವಿಧ ಕೌಶಲ್ಯಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಬೆಳಗಾವಿ,ಫೆ.26 : ಬೆಳಗಾವಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಕೌಶಲ್ಯಭಿವೃದ್ಧಿ ಯೋಜನೆಯಡಿ ತರಬೇತಿಗಾಗಿ ಆಫಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹರು ಮಾ.26 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಠಡಿ ಸಂಖ್ಯೆ-221, ಎರಡನೆ ಮಹಡಿ, ಸುವರ್ಣಸೌಧ, ಬೆಳಗಾವಿ ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ: 0831-2451252 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ///

 

ಹಂಗಾಮಿನಲ್ಲಿ ಮಾವು ಬೆಳೆಯ ಮುಂಜಾಗ್ರತೆ: ಸಸ್ಯ ಸಂರಕ್ಷಣಾ ಮತ್ತು ಅಗತ್ಯ ಪೂರಕ ಕ್ರಮಗಳು

ಬೆಳಗಾವಿ,ಫೆ.26: 2023-2024 ನೇ ಸಾಲಿನ ಮಾವು ಹಂಗಾಮಿನ ಪೂರಕವಾಗಿ ಕೈಗೊಳ್ಳಬೇಕಾದ ಅಗತ್ಯ ಸಸ್ಯ ಸಂರಕ್ಷಣೆ ಮತ್ತು ಬೇಸಾಯದ ಮಾವು ತಳಿಗಳಾದ ಅಲ್ಪಾನೋ ಮತ್ತು ಕೇಸರ ತಳಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮಾವಿನ ಮರಗಳು ಡಿಸೆಂಬರ್ ತಿಂಗಳಲ್ಲಿ ಹೂವು ಕಟ್ಟಿಕೊಂಡಿದ್ದು, ಹೆಚ್ಚುತ್ತಿರುವ ತಾಪಮಾನವು ಆರಂಭಿಕ ಹೂಗಳನ್ನು ಉತ್ತೇಜಿಸಿವೆ. ಜನೇವರಿ ಮತ್ತು ಫೆಬ್ರುವರಿ ಮಾಹೆಯಲ್ಲಿ ಹವಾಮಾಣ ಪರಿಸ್ಥಿತಿಗಳು ಅನುಕೂಲಕರವಾಗಿದ್ದ ಹೇರಳವಾದ ಮಾವಿನ ಹಣುಗಳ ಪೂರೈಕೆ ನಿರೀಕ್ಷಿಸಬಹುದಾಗಿದೆ.
ಈ ವರ್ಷ ಸಾಕಷ್ಟು ಮಳೆಯಾಗದ ಪರಿಣಾಮ ಮಳೆ ಕೊರತೆಯಿಂದಾಗಿ ಬೇಗನೆ ಹೂ ಬಿಡುತ್ತಿದ್ದು, ಮಾರುಕಟ್ಟೆಗೆ ಬೇಗ ಪ್ರವೇಶ ನೀಡುವ ಭರವಸೆ ಮೂಡಿಸಿದೆ. ಈ ವರ್ಷ ಸೀಮಿತ ಮಳೆ ಒಣಹವೆಯಿಂದಾಗಿ ಉತ್ತಮ ಇಳುವರಿ ಸಾಧ್ಯತೆ ಇರುತ್ತದೆ ಬೆಳಗಾವಿ ಜಿಲೆಯಲ್ಲಿ ಹೂ ಬಿಡುವ ಪೂರ್ವಾ ಅವಧಿ ನವೆಂಬರ್ ಮಾಹೆಯಿಂದ ಡಿಸೆಂಬರ್ ಮಾಡೆಯವರೆಗೆ ಹೂ ಬಿಡುವ ಅವಧಿ ಡಿಸೆಂಬರ್ ಮಧ್ಯಭಾಗದಿಂದ ಜನವರಿ ಮಾಹೆಯ ಕೊನೆಯವರೆಗೂ ಕಾಣಬರುತ್ತದೆ.
ಈ ಕೀಟ ಮತ್ತು ರೋಗಗಳು ಹೂ ಬಿಡುವ ಪೂರ್ವ ಅವಧಿಯಲಿ ಇವುಗಳನ್ನು ಯೋಗ ಸಸ್ಯ ಸಂರಕ್ಷಣೆ ಕ್ರಮಗಳಿಂದ ನಿಯಂತ್ರಿಸಿದರೆ ಮುಂಬರುವ ಹೂ ಬಿಡುವ ಹಂತದರೆ.. ಇವುಗಳ ನಿಯಂತ್ರಣ ಪರಿಣಾಮಕಾರಿಯಾಗುತ್ತದೆ. ಹೂ ಬಿಡುವ ಅವಧಿಯಲಿ. ಜಿಗಿಹುಳು, ಹೂತೆನೆ/ ಕುಡಿ ಕೊರಕ, ಡ್ರಿಪ್ಟ್, ನುಸಿ, ಹಿಟ್ಟು ತಿಗಣೆ, ಓಟೆ ಕೊರಕ ಹಾಗೂ ರೋಗಗಳಾದ ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ ಎಲೆಚಿಟ್ಟು ರೋಗಗಳು ಹೆಚ್ಚಿನ ಹಾನಿ ಉಂಟು ಮಾಡುತ್ತವೆ.
ಈ ಹಂಗಾಮಿನಲಿ ಅಗತ್ಯ ಪೂರಕ ಕ್ರಮಗಳು
ಸಿಂಪರಣಾ ದ್ರಾವಣವನ್ನು ಮಾವಿನ ಮರದ ಕಾಂಡ ಮತ್ತು ಎಲಾ ರೆಂಬೆ ಕೊಂಬೆಗಳಿಗೆ ತಲುಪುವಂತೆ ಸಿಂಪಡಿಸುವುದು ಸಿಂಪಡಿಸಹುದು. ಪರಾಗ ಸ್ಪರ್ಷ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು, ಪರಾಗ ಸ್ಪರ್ಷ ಪೂರ್ಣಗೊಂಡ ನಂತರ ಕಾಯಿಯು ಬಟಾಣಿಯಿಂದ ಗೋಲಿ ಗಾತ್ರದ ಹಂತದಲಿ.. ನೀರು ಕೊಡಲು ಪ್ರಾರಂಭಿಸಬಹುದು. ಎರಡು ಮತ್ತು ಮೂರು ರಕ್ಷಣಾತ್ಮಕ/ಪೂರಕ ನೀರಾವರಿ ಕೈಗೊಳ್ಳಬಹುದು,
ಕಚ್ಚಿದ ಕಾಯಿಗಳು ಉದುರದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಚೋಧಕ – ಓಂಂ (Pಟಚಿಟಿoಜಿix) 50 ಠಿಠಿm ಪ್ರಮಾಣದಲಿ ಸಿಂಪಡಿಸಬೇಕು (0.5 mಟ/ಐ. ಪ್ರಮಾಣದಲ್ಲಿ, ಬೆರಸಿ). ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIಊಖ) ರವರು ಹೊರತಂದಿರುವ “ಒಚಿಟಿgo Sಠಿeಛಿiಚಿಟ” ವನ್ನು ಪ್ರತಿ 10 ಲೀಟರ್ ನೀರಿನಲಿ 50ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು. ಈ ಸಿಂಪರಣಾ ದ್ರಾವಣಕ್ಕೆ ಸೋಪು ದ್ರಾವಣವನ್ನು (0.5 ಮಿ.ಲೀ./ಲೀ.) ಮತ್ತು ನಿಂಬೆರಸ ಬೆರಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು.
ಕೈಗೆಟುಕುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿಸಿದಲಿ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದಾಗಿದೆ. ನೇರ ಮಾರುಕಟ್ಟೆ ಸಂಪರ್ಕ ಹೊಂದಿದ ಬೆಳೆಗಾರರಿಗೆ ಇದು ಉತ್ತಮ. ಕ್ರಮವಾಗಲಿದೆ, ಎಲ್ಲಾ, ಕಾಯಿಗಳಿಗೆ ಕವರ್ ಅಳವಡಿಕೆ ಮಾಡುವ ಅಗತ್ಯವಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲೂಕು/ ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///