Belagavi News In Kannada | News Belgaum

ವೈಜ್ಞಾನಿಕ ಮನೋವೃತ್ತಿ ಜಾಗೃತಗೊಳ್ಳಲಿ : ಡಾ. ಜೆ. ಮಂಜಣ್ಣ

ದೇವರು, ಧರ್ಮ, ಆಧ್ಯಾತ್ಮ, ತತ್ವಜ್ಞಾನ ಇವುಗಳನ್ನು ಕೆದಕುತ್ತಾ ವಾದ-ವಿವಾದ ಮಾಡುವ ಬದಲು, ಸೂಕ್ಷ್ಮ ವಿಚಾರಗಳನ್ನು ಸಾರ್ವತ್ರಿಕರಣಗೊಳಿಸದೇ ಸಂಪ್ರದಾಯ, ರೂಢಿ, ಆಧುನಿಕ ಜೀವನಶೈಲಿಗಳಿಂದ ಧೂಳು ಹಿಡಿದಿರುವ ವೈಜ್ಞಾನಿಕ ಮನೋವೃತ್ತಿ ಯುವಕರಲ್ಲಿ ಜಾಗೃತಗೊಳ್ಳಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ. ಮಂಜಣ್ಣ ಕರೆ ನೀಡಿದರು. ಅವರು ಇಂದು ಶಿವಬಸವ ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ವಿದೇಶಗಳÀಲ್ಲಿ ಅಲ್ಲಿನ ಅವಶ್ಯಕತೆ ಮತ್ತು ಅನಿವಾರ್ಯತೆಯಿಂದಾಗಿ ಹೆಚ್ಚು ಸಂಶೋಧನೆಗಳಾದರೆ ಭಾರತದಲ್ಲಿನ ಹೇಳರವಾದ ಸಂಪನ್ಮೂಲ ಮತ್ತು ಸುಸ್ಥಿರ ವಾತಾವರಣದಿಂದಾಗಿ ಇಲ್ಲಿ ಅಷ್ಟೊಂದು ಆಧುನಿಕ ಸಂಶೋಧನೆಳಾಗಿಲ್ಲ. ಯುವಕರು ಈ ಮನಸ್ಥಿತಿಯಿಂದ ಹೊರಬಂದು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳಗಾವಿ ಅಸೋಶೀಯೇಷನ್ ಪಾರ್ ಸೈನ್ಸ ಎಜ್ಯಕೇಶನ್ ಕಾರ್ಯದರ್ಶೀ ಕೆ. ಬಿ. ಹಿರೇಮಠ ಮಾತನಾಡಿ ಮೂಢನಂಬಿಕೆಗಳಿಂದ ನಿತ್ಯ ಜೀವನದಲ್ಲಿ ಏನೆಲ್ಲಾ ಅಪಾಯಗಳಿವೆ ಎಂಬುದನ್ನು ಅರ್ಥೈಸಿದಾಗ ಮಾತ್ರ ಜನ ಅವುಗಳಿಂದ ದೂರವಾಗುತ್ತಾರೆ. ಈ ಕಾರ್ಯವನ್ನು ಯುವಕರು ಮುಂದಾಗಿ ಕೈಗೊಳ್ಳಬೇಕು ಎಂದರು.
ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಎಲ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಶ್ರೀಧರ ಖಿಳ್ಳಿಕೇತರ ವಂದಿಸಿದರು. ಇದೇ ಸಂದರ್ಭದಲ್ಲಿ “ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು” ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚಂದ್ರಗಿರಿ ಮಹಿಳಾ ಬಿ.ಎಡ್. ಕಾಲೇಜಿನ ಗೌರಮ್ಮ ಅರಳೀಕಟ್ಟಿ ಪ್ರಥಮ, ಸಂಗೊಳ್ಳಿ ರಾಯಣ್ಣ ಬಿ. ಎಡ್. ಕಾಲೇಜಿನ ರಶ್ಮಿ ಶೀಲಿ ದ್ವಿತೀಯ ಹಾಗೂ ಎಮ್.ಎನ್.ಆರ್.ಎಸ್. ಶಿಕ್ಷಣ ಮಹಾವಿದ್ಯಾಲಯದ ವಿಜಯಲಕ್ಷಿ್ಮ ಪಟೀಲ ತೃತೀಯ ಸ್ಥಾನ ಪಡೆದುಕೊಂಡರು.