Belagavi News In Kannada | News Belgaum

ಬಿಟ್‌ ಕಾಯಿನ್ ಪ್ರಕರಣ: ಮತ್ತೊಬ್ಬ ಇನ್ಸ್‌ಪೆಕ್ಟರ್ ಅರೆಸ್ಟ್, ಡಿವೈಎಸ್‌ಪಿ ಶ್ರೀಧರ್ ಎಸ್ಕೇಪ್

ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಇನ್ಸ್‌ಪೆಕ್ಟರ್​ನ್ನು ಸಿಐಡಿ ಎಸ್ಐಟಿ ಬಂಧಿಸಿದೆ. ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತಯ್ಯ ಬಂಧಿತ ಆರೋಪಿ. ಈ ಲಕ್ಷ್ಮೀಕಾಂತಯ್ಯ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಇಂದು ಬೆಳಗ್ಗೆ ಇವರನ್ನು ಬಂಧಿಸಿದ್ದಾರೆ.

ಇತ್ತ ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಅವರನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಡೆದಿದೆ.

ಬಿಟ್ ಕಾಯಿನ್  ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್, ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಿನ್ನೆ   ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.

ಎಸ್ಐಟಿ ತಂಡದ ಇನ್ಸ್​ಪೆಕ್ಟರ್ ಅನಿಲ್ ಮತ್ತು ಅವರ ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನು ಶ್ರೀಧರ್ ಪೂಜಾರ್‌ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು