Belagavi News In Kannada | News Belgaum

ಕರುಣಾಸಾಗರದಂತಿರುವ ನನ್ನ ಗುರುದೇವರು “

ಕರುಣಾಸಾಗರದಂತಿರುವ ನನ್ನ ಗುರುದೇವರು ”

ಇಂದಿನ ದಿನಮಾನಗಳಲ್ಲಿ ಕಾವಿಧಾರಿಗಳಿಗೇನು ಕೊರತೆ ಇಲ್ಲ , ಆದರೆ ಪ್ರೀತಿಯ ಕರುಣೆಯಿಂದ ಬಿದ್ದ ಜೀವಗಳನ್ನು ಮೇಲೆತ್ತುವ ಸಂತರ ಸಂಖ್ಯೆ ಅತಿವಿರಳ. ರಾಜಕಾರಣಿಗಳ ಹಿಂದೆ ಜೈಕಾರ ಕೂಗುತ್ತಾ ಭಕ್ತರ ಮನೆಯ ಬಾಗಿಲನ್ನೇ ಮರೆತು ಬಿಟ್ಟು ತಮ್ಮ ಜೊತೆಗೆ ನಾಲ್ಕಾರು ಜನರನ್ನು ಇಟ್ಟುಕೊಂಡು ತಮ್ಮದೇ ಪ್ರಚಾರ ಪ್ರಸಾರ ಮಾಡಿಸಿಕೊಳ್ಳುತ್ತಿರುವ ಮಹಾನುಬಾವರಿಗಿಂತ ತದ್ವಿರುದ್ಧವಾಗಿ ಕಾಣಿಸುತ್ತಾರೆ ನನ್ನ ಗುರುದೇವರು. ಶಿವಾವತಾರಿ ಸಿದ್ದಾರೂಡರ ಆರೋಡ ತತ್ವವನ್ನು ಹಳ್ಳಿ ಹಳ್ಳಿಗಳಿಗೂ ಬಿತ್ತಿ ಬೆಳೆದವರು ಆರೋಡ ಜ್ಯೋತಿ ಶಿವಪುತ್ರ ಅಜ್ಜನವರು. ಅವರಿಂದ ನಿರ್ಮಾಣವಾದ ಶಾಂತಾಶ್ರಮದ ಇಂದಿನ ಪೀಠಾಧಿಪತಿಗಳೇ ನನ್ನ ಗುರುದೇವ ಸದ್ಗುರು ಅಭಿನವ ಸಿದ್ದಾರೂಢ ಸ್ವಾಮೀಜಿಗಳು ಶಾಂತಾಶ್ರಮ ಎಂಬುದು ಆರೋಡ ಪರಂಪರೆಯ ಬಹುಪಾಲು ಜನರ ಗುರುಪೀಠ ಅಂತಹ ಗುರುಪೀಠಕ್ಕೆ ಶ್ರೀ ಗುರು ಅಭಿನವ ಶಿವಪುತ್ರ ಸ್ವಾಮೀಜಿಗಳು ಸಮರ್ಥ ಶಿಷ್ಯರನ್ನೇ ಹುಡುಕಿ ಈ ಸಮಾಜಕ್ಕೆ ಅರ್ಪಿಸಿದರು. ಮೂಲ ಗುರುಪೀಠದ ಪೀಠಾಧಿಪತಿಗಳಾಗಿ ಸರ್ವರ ಮೇಲು ಪ್ರೀತಿಯ ಕರುಣೆತೋರಿಸುತ್ತಾ, ಶಾಸ್ತ್ರದ ಸುಗಂಧವನ್ನು ನಾಡಿನಲ್ಲೇಡೆ ಬೀರುತ್ತಾ ದಾರಿತಪ್ಪುತ್ತಿರುವ ಸಮಾಜವನ್ನು ಭಕ್ತಿಭಾವದೆಡೆಗೆ ಕೊಂಡೊಯ್ಯುತ್ತಿರುವ ಯುವಯೋಗಿಗಳು ನನ್ನ ಗುರುದೇವರು.

ತಮ್ಮ ಪ್ರತಿ ಉಸಿರಿನಲ್ಲೂ ಮಾಡುವ ಪ್ರತಿ ಕೆಲಸದಲ್ಲೂ ತಮ್ಮ ಗುರುಗಳನ್ನೇ ಮೊದಲು ಮಾಡಿಕೊಂಡು ಎಲ್ಲಾ ಯಶಸ್ಸು ಗುರುವಿಂದಲೇ ಎಂದು ಹೇಳುವ ಈ ನಾಡಿನ ಕೆಲವೇ ಕೆಲವು ಸನ್ಯಾಸಿಗಳಲ್ಲಿ ನನ್ನ ಗುರುದೇವರು ಅಗ್ರಗಣ್ಯರ ಸಾಲಿಗೆ ಸೇರುತ್ತಾರೆ. ಇಲ್ಲಿ ಅಭಿನವ ಶಿವಪುತ್ರ ಸ್ವಾಮೀಜಿಗಳನ್ನು ನೆನೆಯುವುದು ಅತ್ಯವಶ್ಯಕ ಏಕೆಂದರೆ ಅನೇಕರ ವಿರೋಧದ ಮಧ್ಯೆಯೂ ತಮ್ಮ ಪೀಠಕ್ಕೆ ಅಳಿದುತೂಗಿ ಎಲ್ಲ ವಿರೋಧವನ್ನು ಮೆಟ್ಟಿನಿಂತು ಭಕ್ತರುದ್ದಾರದ ಜೊತೆಗೆ ಅವರ ಕಣ್ಣೀರು ವರಿಸುವ ಜ್ಞಾನ ಪರ್ವತವನ್ನೇ ಹುಡುಕಿ ನಮ್ಮೆಲ್ಲರ ಪಾಲಿಗೂ ಕರುಣಿಸಿದರು. ಆ ಸಮರ್ಥ ಯೋಗಿಯ ಜ್ಞಾನದ ಎದುರು ತಮ್ಮ ಪ್ರಭಾವ ಕಡಿಮೆಯಾಗಬಹುದೆಂದೆನಿಸಿದ ಕೆಲವರಿಗೆ ಅಭಿನವ ಶಿವಪುತ್ರ ಸ್ವಾಮೀಜಿಗಳ ನಿರ್ಧಾರ ನೋವನ್ನುಂಟು ಮಾಡಿತೊ ಏನು! ಆದರೆ ಭಕ್ತರ ಜ್ಞಾನದಾಹ ಇಂಗಿಸುವ ಶುದ್ಧ ಸಿಹಿತೀರ್ಥವಂತು ದೊರೆಯಿತು. ಹಿಂದಿನ ಶ್ರೀಗಳು ಭಕ್ತರ ಮೇಲಿಟ್ಟಿದ್ದ ಪ್ರೀತಿ ಕಾಳಜಿಯನ್ನು ಕಿಂಚಿತ್ತು ಕಡಿಮೆಯಾಗದಂತೆ ನೋಡಿಕೊಂಡು ಗುರುಗಳ ಕನಸುಗಳನ್ನೆಲ್ಲ ಸಾಕಾರಗೊಳಿಸಿ ಪ್ರಚಾರ ಪ್ರತಿಷ್ಠೆ ಬಯಸದೇ ನನ್ನಂತ ಅನೇಕ ಬೆಳೆಯುವ ಶಿಶುಗಳಿಗೆ ತಾಯಿಯಾಗಿ ರಕ್ಷಿಸುತ್ತಿರುವ ಪ್ರೀತಿಯ ಕರುಣಮೂರ್ತಿ ಮಾತೃ ಹೃದಯದ ಮಹಾಂತರು ಪೂಜ್ಯ ಗುರುದೇವರು. ಅವರ ನುಡಿಗಳನ್ನ ಕೇಳುತ್ತಿದ್ದರೆ ನಮ್ಮಣ್ಣೇ ನಾವು ಮರೆತು ಆಧ್ಯಾತ್ಮ ಲೋಕದ ಸಾಗರದಲ್ಲಿ ತೇಲುತ್ತೇವೆ.ಕಠಿಣ ವಿಷಯಗಳನ್ನು ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೂ ಸರಳವಾಗಿ ಅಣುಭವಕ್ಕೆ ಬರುವಂತೆ ಜೊತೆಗೆ ಮಾತನಾಡುವವರನ್ನು ಮೌನಗೊಳಿಸುವಂತೆ ಇರುತ್ತವೆ ಗುರುದೇವರ ಪ್ರವಚನ.

✍️ ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ.ವಿಜಯಪುರ