Belagavi News In Kannada | News Belgaum

ಹಳೆಯ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ..

ಬೆಳಗಾವಿ: ಭೂ ಸುರಕ್ಷಾ ಯೋಜನೆಯಡಿ ಹಳೆಯ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

ನಗರದಲ್ಲಿರುವ ನಾಡಕಚೇರಿಯಲ್ಲಿ ಹಳೆಯ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಿದ ಸಚಿವರು, ಹಳೆಯ ದಾಖಲೆಗಳ ಸಂರಕ್ಷಣೆಗೆ ಡಿಜಿಟಲೀಕರಣ ಸಹಕಾರಿಯಾಗಿದೆ ಎಂದು ಹೇಳಿದರು.

ದಾಖಲೆಗಳ ರಕ್ಷಣೆ ಜತೆಗೆ ತಕ್ಷಣವೇ ಲಭಿಸುವಂತೆ ಅನುಕೂಲ ಕಲ್ಪಿಸಲು ಹಳೆಯ ದಾಖಲೆಗಳ ಡಿಜಿಟಲೀಕರಣ ಅತ್ಯಗತ್ಯವಾಗಿತ್ತು ಎಂದು ಹೇಳಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಅವರು ಡಿಜಿಟಲೀಕರಣ ವಿಧಾನ ಹಾಗೂ ಹಳೆಯ ದಾಖಲೆಗಳ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್, ಬೆಳಗಾವಿ ತಹಶೀಲ್ದಾರ್‌ ಸಿದ್ರಾಯ‌ ಭೋಸಗಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.