Belagavi News In Kannada | News Belgaum

ಮಾಳಿಂಗರಾಯರ ಮೂರ್ತಿ ಕಳುವು: ಆರೋಪಿ ಬಂಧನ 

ಕೆಂಭಾವಿ: ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಸಮೀಪದ ಮಾಲಹಳ್ಳಿ ಗ್ರಾಮದ ಮಾಳಿಂಗರಾಯ ದೇವರ ಮೂರ್ತಿ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕಲಬುರಗಿ ಮೂಲದ ಈರಣ್ಣ ಗೊಡಕೆ (22)  ಎಂಬ ಆರೋಪಿಯನ್ನು ಬಂಧಿಸಿ 13 ಗ್ರಾಂ ದೇವರ ಬಂಗಾರದ  ಕಣ್ಣುಗಳು ಸೇರಿ ಇನ್ನಿತರ ಆಭರಣ ಪ್ರಕರಣಕ್ಕೆ ಬಳಿಸಿದ ರಾಯಲ್ ಎನ್ ಫೀಲ್ಡ್ ವಾಹನ ಒಳಗೊಂಡಂತೆ 3.58 ಲಕ್ಷ ಮೌಲ್ಯದ  ವಸ್ತುಗಳನ್ನು ಆರೋಪಿಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ.
ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ  ದಕ್ಷಿಣ ಕಾಶಿ ಪ್ರಖ್ಯಾತಿಯ ಮಾಳಹಳ್ಳಿ ಗ್ರಾಮದಲ್ಲಿನ ಶ್ರೀ
ಮಾಳಿಂಗರಾಯರ ದೇವರ ಬೆಳ್ಳಿಯ  ಮೂರ್ತಿ ಮತ್ತು 60 ಗ್ರಾಂ. ಬಂಗಾರದ ಆಭರಣಗಳು ಸೇರಿದಂತೆ ಅಂದಾಜು 5.80ಲಕ್ಷ  ರು.ಮೌಲ್ಯದ ವಸ್ತುಗಳು  ಡಿ.14 ರ ಬೆಳಗಿನ ಜಾವ ಕಳ್ಳತನವಾಗಿತ್ತು ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಿಕ್ಕ ಸುಳಿವು ಸಿಗದ ಕಾರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಪ್ರಕರಣ ಭೇದಿಸಲು ಎಸ್ಪಿ ಜಿ ಸಂಗೀತಾ,  ಹೆಚ್ಚುವರಿ ಎಸ್ಪಿ ಧರಣೇಶ ಹಾಗೂ  ಡಿವೈಎಸ್ಪಿ  ಜಾವೀದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ  ರಚಿಸಲಾಗಿದ್ದ  ಸಿಪಿಐ ಸಚಿನ್ ಚಲವಾದಿ ನೇತೃತ್ವದ ಪಿಎಸ್ ಐ  ರಾಜಶೇಖರ ರಾಠೋಡ್ ಒಳಗೊಂಡ ತಂಡ ಸುದೀರ್ಘ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡದಲ್ಲಿದ್ದ   ಪಿಎಸ್ ಐ ರಾಜಶೇಖರ್ ರಾಠೋಡ್, ಮಾಣಿಕೆಪ್ಪ  , ಪಿಸಿಗಳಾದ ಬಸವರಾಜ, ಬಾಬು ನಾಯ್ಕಲ್ , ಪರಮಾನಂದ, ಗುಂಡಪ್ಪ, ಶಿವಪ್ಪ , ಹುಸೇನಿ , ಆನಂದ , ಕಾಶಿನಾಥ, ಮಾಳಪ್ಪ ಅವರ ಕಾರ್ಯಕ್ಕೆ  ಎಸ್ಪಿ ಸೇರಿದಂತೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.