Belagavi News In Kannada | News Belgaum

ಮಹಿಳಾ ಓಟಗಾರರಿಗೆ ತಲಾ ರೂ.50,000 ನಗದು ಬಹುಮಾನದ ಜೊತೆಗೆ “ಡಿಜಿಪಿ ಕರ್ನಾಟಕ ಕಪ್” 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 10 ಕಿಮೀ ಓಟವನ್ನು ಮೊದಲು ಪೂರ್ಣಗೊಳಿಸುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ರೂ.50,000 ನಗದು ಬಹುಮಾನದ ಜೊತೆಗೆ “ಡಿಜಿಪಿ ಕರ್ನಾಟಕ ಕಪ್” ಪಾರಿತೋಷಕ ನೀಡಿ ಗೌರವಿಸಲಾಗುವುದು. 10ಕಿ.ಮೀ ಓಟದಲ್ಲಿ ಮೊದಲಿಗರಾಗುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ರೂ.1,50,000/-ಗಳ ಬಹುಮಾನ ನೀಡಲಾಗುವುದು.

ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಓಟದಲ್ಲಿ ಹಿರಿಯ ನಾಗರೀಕರು ವಿಶೇಷ ಸಾಮಾರ್ಥ್ಯವುಳ್ಳ ಉತ್ಸಾಹಿಗಳು, ಹವ್ಯಾಸಿ ಮತ್ತು ವೃತ್ತಿಪರ ಓಟಗಾರರ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಇದೇ ರೀತಿಯ ಓಟಗಳನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ನಗರಗಳಲ್ಲಿ ಆಯೋಜಿಸಲಾಗಿದೆ.

ಈ ಓಟದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದ್ದು, ಒಂದು ಟಿ-ಶರ್ಟ್, ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಮತ್ತು ಮಾಡಲಾಗಿರುತ್ತದೆ. ಆಸಕ್ತರು www.click2race.com ವೆಬ್‌ಸೈಟ್ ಮುಖಾಂತರ ಹೆಸರು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ.