Belagavi News In Kannada | News Belgaum

ದುಬೈನಿಂದ ಬೆಂಗಳೂರಿಗೆ ಕೋಟ್ಯಾಂತರ ಮೌಲ್ಯದ ಚಿನ್ನ , ನಗದು ಸಾಗಾಟ: ಆರೋಪಿ ವಶಕ್ಕೆ

ಬೆಂಗಳೂರು: ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯಿಂದ 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಂಗಾರ ಹಾಗೂ ನಗದು ಹಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 500 ಮುಖ ಬೆಲೆಯ 51 ಲಕ್ಷ 95 ಸಾವಿರದ 500 ರೂಪಾಯಿ ಹಾಗೂ 50 ಲಕ್ಷ 79 ಸಾವಿರದ 967 ರೂಪಾಯಿ ಮೌಲ್ಯದ 824.67 ಗ್ರಾಂ ತೂಕದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಅಕ್ರಮವಾಗಿ ಚಿನ್ನವನ್ನು ಪೇಸ್ಟ್​ ರೂಪದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾನೆ.

ಇದನ್ನು ಮತ್ತೆ ಕಳ್ಳಸಾಗಣೆ ಮಾಡಲು ಚೆಕ್ ಇನ್ ಬ್ಯಾಗೇಜ್​ನಲ್ಲಿ ಹಣ ಮರೆಮಾಚಿ ಸಾಗಿಸಲು ಯತ್ನಿಸಿದ್ದನು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನ, ಹಣ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ./////