Belagavi News In Kannada | News Belgaum

ಕಂಚಿನ ಪದಕ ಮುಡಿಗೇರಿಸಿಕೊಂಡ ಕ್ರೀಡಾಪಟುಗಳು

ಬೆಳಗಾವಿ:  ಇತ್ತಿಚಿಗೆ ಆಸಾಮ ರಾಜ್ಯದ ಗೌಹಾಟಿಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಖೆಲೊ ಇಂಡಿಯಾ ಅಂತರ್ ವಿಶ್ವ ವಿದ್ಯಾಲಯಗಳ ಕ್ರೀಡಾಕೂಟದಲ್ಲಿ  ಬೆಳಗಾವಿಯ ಜೆಜಿಎನ್‌ಡಿ ಭರತೇಶ ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿ ೪ಘಿ೪೦೦ ರಿಲೆ ಓಟದಲ್ಲಿ  ಕಂಚಿನ ಪದಕ ಪಡೆಯವುದರ ಮೂಲಕ ಸಾಧನೆಗೈದಿದ್ದಾರೆ.

ಮಹಾವಿದ್ಯಾಲಯದ ಕ್ರೀಡಾಪಟುಗಳಾದ ತುಷಾರ ಬೆಕನೆ, ಚೈತನ್ಯ ಮುದಲಿಯಾರ ಹಾಗೂ ಭುವನ ಪೂಜೆರಿ ಈ ಕ್ರೀಡಾಪಟುಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ. ಸಾಧನೆಗೈದ  ಕ್ರೀಡಾಪಟುಗಳನ್ನು ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಾವಿದ್ಯಾಲಯದ ಸಿಬಂದಿ ವರ್ಗದವರು  ಸನ್ಮಾನಿಸಿ ಗೌರವಿಸಿದರು.//////