Belagavi News In Kannada | News Belgaum

ಕರ್ನಾಟಕ ಸುವರ್ಣ ಸಂಭ್ರಮ: ಜ್ಯೋತಿ ರಥಯಾತ್ರೆ ಮಾ.7 ರಂದು ಬೆಳಗಾವಿ ನಗರಕ್ಕೆ

ಬೆಳಗಾವಿ, ಮಾ.6 : ಕರ್ನಾಟಕ ಸಂಭ್ರಮ – 50ರ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆಯು ಗುರುವಾರ(ಮಾ.7) ಬೆಳಗ್ಗೆ 10 ಗಂಟೆಗೆ ಬೆಳಗಾವಿ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ.
ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಯಾತ್ರೆಯು ಫೆ‌,17 ರಂದು ಅಥಣಿ ಮೂಲಕ ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಿರುತ್ತದೆ.
ಈಗಾಗಲೇ ಅಥಣಿ, ಕಾಗವಾಡ,ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ ತಾಲ್ಲೂಕುಗಳಲ್ಲಿ ಸಂಚರಿಸಿದ್ದು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು‌ ಹಾಗೂ ಗಣ್ಯರಿಂದ ಅದ್ಧೂರಿ ಸ್ವಾಗತ ನೀಡಲಾಗಿರುತ್ತದೆ.
ಗುರುವಾರ(ಮಾ.7) ಬೆಳಗಾವಿ ನಗರಕ್ಕೆ ಆಗಮಿಸಲಿರುವ ರಥಯಾತ್ರೆಯನ್ನು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಗಣ್ಯರು ಬರ‌ಮಾಡಿಕೊಳ್ಳಲಿದ್ದಾರೆ.
ನಗರದಲ್ಲಿ ಸಂಚರಿಸಿದ ಬಳಿಕ ಖಾನಾಪುರ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಗೋಕಾಕ, ಮೂಡಲಗಿ, ರಾಮದುರ್ಗ ತಾಲ್ಲೂಕುಗಳಲ್ಲಿ ಸಂಚರಿಸಿ ಸವದತ್ತಿ ಮೂಲಕ ಧಾರವಾಡ ಜಿಲ್ಲೆಗೆ ತೆರಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ತಿಳಿಸಿದ್ದಾರೆ.
ಸಾರ್ವಜನಿಕರು‌ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ರಥಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ.