Belagavi News In Kannada | News Belgaum

ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಕಾರ್ಯ ಶಾಘ್ಲನೀಯ: ಸಚಿವ ಸತೀಶ್‌ ಜಾರಕಿಹೊಳಿ…

ಬೆಳಗಾವಿ: ಸಾಮಾಜಿಕ ಸೇವೆ ಮಾಡುವುದು ನೋಡಲು ಅಷ್ಟೇ ಸುಂದರ. ಆದರೆ ಸಾಮಾಜಿಕ ಸೇವೆ ಸಲ್ಲಿಸುವುದು ಕಷ್ಟದ ಕೆಲಸವಿದೆ. ಜೋತಿ ಭಾವಿಕಟ್ಟಿ ನೇತೃತ್ವದ ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶಾಘ್ಲನೀಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಮಹಾಂತೇಶ ನಗರದ ದೇಸಾಯಿ ಲಾನ್ಸ್‌ ನಲ್ಲಿ ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್,  STER ಮೇಕಪ್ ಸ್ಟುಡಿಯೋ-ಅಕಾಡೆಮಿ, ಮಾಸ್ಟರ್ ಮೇಕಪ್ ಸ್ಟುಡಿಯೋ-ಅಕಾಡೆಮಿ ಹಮ್ಮಿಕೊಂಡಿದ್ದ ಸ್ಪೂರ್ತಿ ಪ್ರದರ್ಶನ-2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

 

 

ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ ಟೀಮ್‌  ಸುಮಾರು 8 ವರ್ಷಗಳಿಂದ ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕೋವಿಡ್‌ ಸಮಯದಲ್ಲಿ ಈ ಕಾರ್ಯಕ್ರಮ ಸ್ಥಗಿತಗೊಳಿಸಿದ್ದರು. ಕಾರಣ ಮತ್ತೆ ವಸ್ತು ಪ್ರದರ್ಶನ, ಮಹಿಳೆಯರ ಫ್ಯಾಶನ್ ಶೋ ನಡೆಸುತ್ತಿದ್ದಾರೆ. ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ಗೆ ನಮ್ಮಿಂದ ಸದಾ ಸಹಾಯ ಸಹಕಾರ ನೀಡುತ್ತೇವೆ. ನಿಮಗೆ ಒಂದು ಸ್ಥಳ ಸೇರಿದಂತೆ ಕಟ್ಟಡವನ್ನು ನಿರ್ಮಿಸಿ ಕೊಡುತ್ತೇನೆಂದು ಇದೇ ವೇಳೆ ಭರವಸೆ ನೀಡಿದರು. 

ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಮಳಿಗೆಗಳಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅಲ್ಲಿದ್ದ ತಿನಿಸು ಮಳಿಗೆಗೂ ಭೇಟಿ ತಿಂಡಿ ಸವಿದರು.

ಇದೇ ವೇಳೆ ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರುನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಆಸೀಫ್‌ (ರಾಜು) ಸೇಠ್‌, ಕಾಂಗ್ರೆಸ್‌ ಮುಖಂಡ ಗಿರೀಶ್‌ ಸೋನವಾಲಕರ್‌, ಜ್ಯೋತಿ ಭಾವಿಕಟ್ಟಿ, ರಾಜಶೇಖರ ಭಾವಿಕಟ್ಟಿ, ರವೀಂದ್ರ ಹುಬರಟ್ಟಿ ಸೇರಿದಂತೆ ಅಪಾರ ಸಂಖ್ಯೆಯ ಮಹಿಳೆಯರು ಇದ್ದರು.