Belagavi News In Kannada | News Belgaum

ಅಕ್ಷಯ ವೀರಮುಖ ಸಮಾಜಮುಖಿ ಜನ್ಮ ದಿನ ಆಚರಣೆ • ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆ, ವಿಶೇಷ ಚೇತನರಿಗೆ ಪೌಷ್ಠಿಕ ಆಹಾರ ವಿತರಣೆ

 

ಹುಕ್ಕೇರಿ : ತಾಲೂಕಿನ ಹೆಬ್ಬಾಳ ಗ್ರಾಮದ ಸಾಮಾಜಿಕ ಕಾರ್ಯಕರ್ತರು ಆದ ಯುವ ಮುಖಂಡ ಅಕ್ಷಯ ವೀರಮುಖ ಅವರು ತಮ್ಮ 34ನೇ ಜನ್ಮ ದಿನವನ್ನು ವಿಭಿನ್ನ, ಸರಳ ಮತ್ತು ಸಮಾಜಮುಖಿಯಾಗಿ ಆಚರಿಸಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಕುಟುಂಬ ಸಮೇತ ತೆರಳಿದ ಅಕ್ಷಯ ವೀರಮುಖ ಅವರು ಗ್ರಾಮದ ರುದ್ರಾವಧೂತ ಮಠದ ಕನ್ನಡ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ ಸೇರಿದಂತೆ ಶಾಲಾ ಸಲಕರಣೆ ವಿತರಿಸಿದರು. ನಂತರ ಯಮಕನಮರಡಿ ಸರ್ಕಾರಿ ಆಸ್ಪತ್ರೆ ಒಳರೋಗಿಗಳು, ಗರ್ಭೀಣಿಯರಿಗೆ ಹಣ್ಣು-ಹಂಪಲ ವಿತರಿಸಿದರು.
ಬಳಿಕ ಹಿಡಕಲ್ ಡ್ಯಾಮ್ ವಿಶೇಷಚೇತನ (ಬುದ್ಧಿಮಾಂಧ್ಯ) ಮಕ್ಕಳಿಗೆ ಪೌಷ್ಠಿಕ ಆಹಾರ, ಹಣ್ಣು, ಬಿಸ್ಕೀಟ್ ವಿತರಿಸಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡು ಜೀವನದ ಸಾರ್ಥಕತೆ ಕಂಡುಕೊಂಡರು. ನಂತರ ಹುನ್ನೂರ ಪ್ರವಾಸಿ ಮಂದಿರದಲ್ಲಿ ಸಮಾಜ ಮುಖಂಡರೊಂದಿಗೆ ನಡೆದ ಚರ್ಚಾಕೂಟದಲ್ಲಿ ಭಾಗಿಯಾದರು.
ಮುಖಂಡರಾದ ಬಸವರಾಜ ತಳವಾರ, ಉಮೇಶ ಭೀಮಗೋಳ, ರಾಮಕೃಷ್ಣ ಪಾನಬುಡೆ, ಅಶೋಕ ತಳವಾರ, ಗಣಪತಿ ಕಾಂಬಳೆ, ದೀಪಕ ವೀರಮುಖ, ಅಪ್ಪಣ್ಣಾ ಖಾತೇದಾರ, ಶಂಕರ ತಿಪ್ಪನಾಯಿಕ, ಮಾರುತಿ ತಳವಾರ, ಪ್ರವೀಣ ಜಕ್ಕಪ್ಪಗೋಳ, ಸಂಜು ಜೀವನ್ನವರ, ರಮೇಶ ತಳವಾರ, ಮುತ್ತು ಕಾಂಬಳೆ, ಕಾಶಪ್ಪ ಹರಿಜನ, ಕುಮಾರ ತಳವಾರ, ಸಚಿನ್ ಚಿಂಚಣಿ, ಬಾಬು ಕಡಲಗಿ, ಪ್ರಕಾಶ ಕೋಳಿ, ಚಂದ್ರಕಾಂತ ವಾರಕರಿ, ರೋಹತ ತಳವಾರ, ಅಮರ ಶಿಂಗೆ, ವಿನೋದ ಮಾಳಗೆ ಮತ್ತಿತರರು ಉಪಸ್ಥಿತರಿದ್ದರು.