Belagavi News In Kannada | News Belgaum

ಅನುಮಾನಾಸ್ಪದವಾಗಿ 17 ವರ್ಷದ ಗರ್ಭಿಣಿ ಸಾವು: ಪತಿ ಸೇರಿ ಏಳು ಮಂದಿ ವಿರುದ್ಧ ದೂರು ದಾಖಲು..!

ಬೆಳಗಾವಿ:  ಅನುಮಾನಾಸ್ಪದವಾಗಿ 17 ವರ್ಷದ  ಗರ್ಭಿಣಿ ಯುವತಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ  ನಡೆದಿದೆ. ಪತಿಯ ಮನೆಯವರೇ  ಮಗಳನ್ನು ಕೊಲೆಮಾಡಿದ್ದಾರೆಂದು  ಯುವತಿ ಪೋಷಕರು ಆರೋಪಿಸಿದ್ದಾರೆ.

ಹೀನಾ ಸಾಹೀಲ್ ಬಾಗವಾನ್‌ (17) ಮೃತ ಯುವತಿ,  ಪತಿ ಸಾಹೀಲ್‌ ಕುತುಬುದ್ದಿನ ಬಾಗವಾನ್‌ , ಫರೀದಾ ಕುತುಬುದ್ದಿನ  ಬಾಗವಾನ್‌, ಕುತುಬುದ್ದಿನ  ಬಾಗವಾನ್‌ , ಸನ್ಮಾನ ಕುತುಬುದ್ದಿನ  ಬಾಗವಾನ್‌, ಅಬ್ಬಾಸ ಅಬ್ದುಹಮೀದ ಡೋಣಿ ವಿರುದ್ಧ ಯುವತಿ ಪೋಷಕರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ:- ಕಳೆದ ವರ್ಷವೇ ಹೀನಾಳನ್ನು ಬಲವಂತವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ, ಮಗಳಿಗೆ  ಲೈಂಗಿಕ ಕಿರುಕುಳ ನೀಡಿದ್ದಾರೆ. ಮಗಳು ಗರ್ಭಿನಿಯಾಗುತ್ತಿದಂತೆ ಪತಿಯ ಮನೆಯವರು ಮಗಳಿಗೆ ಚಿತ್ರಹಿಂಸೆ ನೀಡಿ,  ನಿನಗೆ ಮನೆ ಕೆಲಸ ಬರುವುದಿಲ್ಲ ಎಂದು ಮಗಳನ್ನು ಬಲಿಪಡೆದಿದ್ದಾರೆ ಮಾಡಿದ್ದಾರೆ ಎಂದು ಪೋಷಕರು ದೂರು ಸಲ್ಲಿಸಿದ್ದಾರೆ. ಮೃತ ಯುವತಿ ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಸ್ಥಳಕ್ಕೆ ತಹಶೀಲ್ದಾರ ಸಿದ್ದರಾಯ ಬೋಸಗಿ, ಹಿರೇಬಾಗೇವಾಡಿ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದಾರೆ ಎನ್ನಲಾಗಿದೆ.