Belagavi News In Kannada | News Belgaum

ಬೆಳಗಾವಿ:  ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು.

 

ಬೆಳಗಾವಿ: ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಇಲ್ಲಿನ ಬೆಳಗಾವಿಯ  ರೈಲ್ವೆ ವ್ಯಾಪ್ತಿಯ ದೇಸೂರ ಬಳಿಯಲ್ಲಿ ಭಾನುವಾರ  ನಡೆದಿದೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಆ ವ್ಯಕ್ತಿಗೆ ಸುಮಾರು  30-35 ವರ್ಷ ವಯಸ್ಸಾಗಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಮಧ್ಯರಾತ್ರಿ ಚಲಿಸುತ್ತಿದ್ದ ಎಕ್ಸ್‌ ಪ್ರೇಸ್‌   ರೈಲಿಗೆ ತಲೆಕೊಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ.    ಅಪರಿಚಿತ ಎತ್ತರ 5.7 , ಸಾಧಾ ಗಪ್ಪು ಮೈ ಬಣ್ಣ ಸದೃಢವಾಗಿದ್ದ, ಕೊರಳಲ್ಲಿ ಕೆಂಪು ದಾರ ಧರಿಸಿದ್ದಾನೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ..

 

ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಹಾಗೂ ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ. ಬೆಳಗಾವಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.