Belagavi News In Kannada | News Belgaum

ಅಪರಿಚಿತ ವ್ಯಕ್ತಿ ಶವ ಪತ್ತೆ

ಬೆಳಗಾವಿ,ಮಾ.11 : ದೇಸೂರು ರೈಲು ನಿಲ್ದಾಣದ ಮಧ್ಯ ಮಾ. 10 ರಂದು ಚಲಿಸುತ್ತಿರುವ ರೈಲು ಗಾಡಿಯ ಮುಂದೆ ಬಿದ್ದು ಅಪರಿಚಿತ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ವಯಸ್ಸು 30 ರಿಂದ 35 ಎಂದು ಅಂದಾಜಿಸಲಾಗಿದ್ದು, ಎತ್ತರ 5 ಅಡಿ 7 ಇಂಚು , ಕಪ್ಪು ಮೈಬಣ್ಣ, ಮೈಯಿಂದ ಸದೃಡ, ಉದ್ದ ಮುಖ ಹಾಗೂ ದುಂಡು ಮೂಗು, ಕಪ್ಪು ಕೂದಲು, ಸಣ್ಣ ಕಪ್ಪು ಮಿಸೆ ದಾಡಿ ಇರುತ್ತವೆ. ಕೆಪ್ಪು ಬಣ್ಣದ ಪುಲ್ ಶರ್ಟಮ್ತತು ತಿಳಿ ಬಣ್ಣದ ಹಾಪ್ ಶರ್ಟ, ಕಪ್ಪು ಬಣ್ಣದ ಪುಲ ಪ್ಯಾಂಟ್ ಕೋರಳಲ್ಲಿ ಕೆಂಪು ದಾರ ಧರಿಸಿರುತ್ತಾರೆ.
ಸದರಿ ಮೃತನ ವಾರಸುದಾರರು ಕಂಡು ಬಂದಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0831-2405273 ಅಥವಾ ಪಿ.ಎಸ್.ಐ ಮೂಬೈಲ್ ನಂ 9480802127 ಸಂರ್ಪಕಿಸಲು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.