Belagavi News In Kannada | News Belgaum

ಸಿದ್ದಿ ಜನಾಂಗಕ್ಕೆ ಮೂಲಭೂತ ಸೌಲಭ್ಯ ನೀಡುವಂತೆ ಮನವಿ


ಬೆಳಗಾವಿ,ಮಾ.15: ಖಾನಾಪೂರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ವಾಸವಿರುವ ಸಿದ್ದಿ ಜನಾಂಗದ ಕಾಲೋನಿಗೆ ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ ಅವರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದ ಮೇರೆಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಸಭೆ ಜರುಗಿಸಿ ಚರ್ಚಿಸಿದರು.
ಸಿದ್ಧಿ ಕಾಲೋನಿ ಭೇಟಿ ಸಂದರ್ಭದಲ್ಲಿ ಸಮಾಜದ ಪ್ರಮುಖರು ಸರ್ಕಾರದ ವತಿಯಿಂದ ವಿವಿಧ ಮೂಲಭೂತ ಸೌಲಭ್ಯಗಳಾದ ಪಕ್ಕಾ ಮನೆ, ಕಾಲೋನಿಗೆ ನೀರಿನ ವ್ಯವಸ್ಥೆ, ವ್ಯವಸಾಯಕ್ಕಾಗಿ ಸರ್ಕಾರದಿಂದ ಭೂಮಿ, ಮಕ್ಕಳಿಗಾಗಿ ಒಳ್ಳೆಯ ಶಿಕ್ಷಣ, ಹಾಸ್ಟೇಲ್ ವ್ಯವಸ್ಥೆ, ಕ್ರೀಡಾ ಚಟುವಟಿಕೆಗಳಿಗಾಗಿ ಕ್ರೀಡಾ ಹಾಸ್ಟೇಲ್ ವ್ಯವಸ್ಥೆ ಹಾಗೂ ಆಸ್ಪತ್ರೆ ವ್ಯವಸ್ಥೆ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಮಂಜೂರಾತಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.