Belagavi News In Kannada | News Belgaum

ಪಿಡಿಓ ನೇಮಕಕ್ಕೆ ಒತ್ತಾಯ

ಕೆಂಭಾವಿ: ಸಮೀಪದ ಯಾಳಗಿ ಗ್ರಾಮ ಪಂಚಾಯತಿಗೆ ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ತಾಲುಕು ಪಂಚಾಯತ ಕಾರ್ಯನಿರ್ವಾಹಣ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದ್ದು, ಯಾಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯ ನಿಮಿತ್ಯ ಗೈರಾಗಿರುತ್ತಾರೆ.
ಇದರಿಂದ ಪಂಚಾಯತ ಕಾರ್ಯಗಳು ಸ್ಥಗಿತಗೊಳ್ಳುತ್ತಿದ್ದು, ಆಡಳಿತ ಕುಂಠಿತಗೊಂಡು ನಾಗರೀಕರು ತೊಂದರೆ ಅನುಭವಿಸುವಂತಾಗಿದೆ, ಕಾರಣ ಪ್ರಭಾರಿ ಅಧಿಕಾರಿಗಳನ್ನು ನೀಡದೆ ಯಾಳಗಿ ಗ್ರಾಮ ಪಂಚಾಯತಿಗೆ ಖಾಯಂ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ. .
ಈ ಸಂದರ್ಭದಲ್ಲಿ ಕೆ.ಅರ್. ಡಿ. ಎಸ್‌. ಎಸ್  ಜಿಲ್ಲಾ ಸಮಿತಿಯ ಸಂಚಾಲಕ ಗೋಪಾಲ್ ಹೆಚ್ ತಳವಾರ್ ಹಾಗೂ ಸಂ. ಸಂಚಾಲಕರಾದ ಶರಣಪ್ಪ ವಾಗಣಗೇರಿ, ಶಿವಶರಣ ಎಮ್ ನಾಗರಡ್ಡಿ ಸೇರಿದಂತೆ ಇತರರಿದ್ದರು.