Belagavi News In Kannada | News Belgaum

ರೂ 1,000 ಕೋಟಿ ವೆಚ್ಚದ ಭಾರತದ ಎರಡನೇ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಕ್ರಾ

ಬೆಂಗಳೂರು : ಸಕ್ರಾ ವರ್ಲ್ಡ್ ಆಸ್ಪತ್ರೆ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯಕ್ಕಾಗಿ ತನ್ನ ದೂರದೃಷ್ಟಿಯ ಯೋಜನೆಯೊಂದನ್ನು ಪ್ರಕಟಿಸಿದೆ. ಎಂ.ಎನ್‌.ಸಿ ಆಸ್ಪತ್ರೆಗಳ ಸಮೂಹದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಮಹತ್ವದ ಘೋಷಣೆ ಮಾಡಲಾಯಿತು. ಸಕ್ರಾ, ಭಾರತದ ಮೊದಲ 100% ಎಫ್‌.ಡಿ.ಐ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಜಪಾನಿನ ನಾವೀನ್ಯತೆ ಮತ್ತು ತಂತ್ರಜ್ಞಾನದಿಂದ ನಡೆಸಲ್ಪಡುವ ಆರೋಗ್ಯ ಕ್ಷೇತ್ರದ ಪ್ರಮುಖ ಹೆಸರಾಗಿರುವ ಸೆಕೋಮ್‌ ಮೆಡಿಕಲ್ ಸಿಸ್ಟಮ್ ಮತ್ತು ಸಹಯೋಗಿ ಉದ್ಯಮ ಸಂಸ್ಥೆ ಟೊಯೊಟಾ ಟ್ಸುಶೋ ನಡುವಿನ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ. ಜಪಾನ್‌ನ ಸೆಕೋಮ್‌ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ & ಸೆಕೋಮ್ ಮೆಡಿಕಲ್ ಸಿಸ್ಟಮ್ ಕಂ. ಲಿಮಿಟೆಡ್ ನ ಮುಖ್ಯಸ್ಥ ತತ್ಸುರೊ ಫ್ಯೂಸ್, ಜಪಾನ್ನ ಟೊಯೋಟಾ ಟ್ಸುಶೋ ಕಾರ್ಪೊರೇಷನ್ ವಿಭಾಗದ ಸಿ.ಇ.ಒ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಹಿರೋಷಿ ಯೋನೆನಾಗಾ, ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯುಯಿಚಿ ನಗಾನೊ, ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ಉಪ ವ್ಯವಸ್ಥಾಪಕ ನಿರ್ದೇಶಕ ನಯೋಯಾ ಮತ್ಸುಮಿ ಮತ್ತು ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವಕೇಶ್ ಫಾಸು ಅವರು ಸಕ್ರಾದ ವಿಸ್ತರಣಾ ಯೋಜನೆಗಳು ಮತ್ತು ಇತರ ಅದ್ಭುತ ಯೋಜನೆಗಳ ಅನಾವರಣ ಸಂದರ್ಭಕ್ಕೆ ಸಾಕ್ಷಿಯಾದರು.
ಬೆಂಗಳೂರು ಉತ್ತರದ ಬಾಣಸವಾಡಿಯಲ್ಲಿ 1,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಆಯಕಟ್ಟಿನ ಸ್ಥಳದಲ್ಲಿರುವ ಸಕ್ರಾದ ಹೊಸ ಸೌಲಭ್ಯ, 500-ಹಾಸಿಗೆ ಸಾಮರ್ಥ್ಯ ಮತ್ತು 600,000 ಚದರ ಅಡಿ ವಿಸ್ತಾರದ ನಿರ್ಮಾಣ ಪ್ರದೇಶ ಹೊಂದಿದೆ. ಈ ಸೌಲಭ್ಯ ಸ್ಥಳೀಯರಿಗೆ ಮತ್ತು ಅದರಾಚೆಗಿನ ಜನರಿಗೂ ಮಿತಿಯಿಲ್ಲದ ಆರೋಗ್ಯ ಸೇವೆಗಳನ್ನು ಒದಗಿಸುವ ಸಕ್ರಾದ ಬದ್ಧತೆಯನ್ನು ತೋರಿಸುತ್ತದೆ.
ಹೊಸ ಘಟಕ ಸುಧಾರಿತ ಆಂಕೊಲಾಜಿ ಚಿಕಿತ್ಸೆ ಮತ್ತು ಅತ್ಯಾಧುನಿಕ ಪುನರ್ವಸತಿ ಯೋಜನೆಗಳು ಸೇರಿದಂತೆ ಸ್ಪೆಷಾಲಿಟಿಗಳು ಮತ್ತು ಸೂಪರ್ ಸ್ಪೆಷಾಲಿಟಿಗಳ ಸಮಗ್ರ ಶ್ರೇಣಿಯನ್ನು ಒದಗಿಸಲಿವೆ. “ಸೆಕಾಮ್ ಮೆಡಿಕಲ್ ಸಿಸ್ಟಮ್ ಮತ್ತು ಟೊಯೋಟಾ ಟ್ಸುಶೋಗಳ ಪರಿಣತಿಯ ಸಂಯೋಜನೆಯಲ್ಲಿ ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸಲು ನಾವು ಹೆಮ್ಮೆಪಡುತ್ತೇವೆ. ಹೊಸ ಸೌಲಭ್ಯ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಸಮುದಾಯಗಳ ಆರೋಗ್ಯ ಅಗತ್ಯಗಳನ್ನು ಪೂರೈಸುವ ನಮ್ಮ ದೃಢವಾದ ಬದ್ಧತೆಯ ವಿಸ್ತರಣೆಯಾಗಿದೆ,” ಎಂದು ಹೊಸ ಯೋಜನೆ ಘೋಷಿಸಿದ ಟ್ಯಾಟ್ಸುರೊ ಫ್ಯೂಸ್ ಹೇಳಿದರು.
ಕಾರ್ಯಕ್ರಮ, ಭಾರತದಲ್ಲಿ ಸಕ್ರಾ ವರ್ಲ್ಡ್ ಆಸ್ಪತ್ರೆಯ ಜಾಗತಿಕ ನಾಯಕತ್ವದ ಆಸ್ಪತ್ರೆಯ ಹತ್ತು ವರ್ಷಗಳ ಪ್ರಯಾಣ, ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನದ ಏಕೀಕರಣ ಮತ್ತು ಜಪಾನ್‌ ಆವಿಷ್ಕಾರ ಮತ್ತು ಎರಡನೇ ಭಾಗದಲ್ಲಿ 1,000 ಹಾಸಿಗೆಗಳ ಹಂತ ಸೇರಿದಂತೆ ಅದರ ಮುಂಬರುವ ಯೋಜನೆಗಳ ಕುರಿತು ಒಳನೋಟ ಒದಗಿಸಿತು.
“ನಾವೀನ್ಯತೆ ಮತ್ತು ಸಹಯೋಗದ ಶಕ್ತಿಯನ್ನು ಬಳಸಿಕೊಂಡು, ನಮ್ಮ ಹೊಸ ಸೌಲಭ್ಯದ ಆರಂಭ, ನಿರಂತರ ಆರೋಗ್ಯ ಪರಿಹಾರಗಳನ್ನು ತಲುಪಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು,” ಎಂದು ಹಿರೋಶಿ ಯೊನೆನಾಗಾ ವಿವರಿಸಿದರು
“ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣ ನಮ್ಮ ಬೆಳವಣಿಗೆ ಹಾದಿಯ ಅವಿಭಾಜ್ಯ ಅಂಗ. ನಿರಂತರ ಕಲಿಕೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಗುರಿ,” ಎಂದು ಲವ್ಕೇಶ್ ಫಾಸು ಹೇಳಿದರು.