Belagavi News In Kannada | News Belgaum

ಬೆಳಗಾವಿ ತಾಲ್ಲೂಕಿನಲ್ಲಿ ಮತ ಜಾಗೃತಿ ಅಭಿಯಾನಕ್ಕೆ ಚಾಲನೆ

ಬೆಳಗಾವಿ,ಮಾ.19   ಬೆಳಗಾವಿ ತಾಲ್ಲೂಕ ಪಂಚಾಯತ ಆವರಣದಲ್ಲಿ ಸೋಮವಾರ (ಮಾರ್ಚ 19) ರಂದು ಸಹಾಯಕ ಚುನಾವಣಾಧಿಕಾರಿಗಳಾದ ಸಿ.ಡಬ್ಲೂ ಶೇಕಿಲ್ ಅಹಮ್ಮದ್, ತಹಶೀಲ್ದಾರ ಹಾಗೂ ತಾಲ್ಲೂಕಾ ದಂಡಾಧಿಕಾರಿಗಳಾದ ಸಿದ್ದರಾಯ ಭೋಸಗಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರಡ್ಡಿ ಪಾಟೀಲ್ ಅವರು ಸಹಿ ಮತ್ತು ಸೇಲ್ಪಿ ಪಾಯಿಂಟ್ ನಲ್ಲಿ ಫೆÇೀಟೋ ತೆಗೆದುಕೊಳ್ಳುವ ಮೂಲಕ ಮತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸಹಾಯಕ ನಿರ್ದೇಶಕರು (ಪ.ರಾ) ಗಣೇಶ ಕೆ.ಎಸ್, ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ರಾಮನಗೌಡ ಮುದಕನಗೌಡರ, ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.