Belagavi News In Kannada | News Belgaum

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕ್ಕೆ ಪಡೆದ ಅಥಣಿ ಪೊಲೀಸರು

ಬೆಳಗಾವಿ: ಕೊಡಗಾನೂರ ರಸ್ತೆಯ ಬದಿಯಲ್ಲಿಅಕ್ರಮವಾಗಿ ಸಂಗ್ರಹಿಸಿಟ್ಟ 20ಕ್ಕೂ ಹೆಚ್ಚು ಬಾಕ್ಸ್ ಮದ್ಯವನ್ನು ಅಥಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಂದಗಾಂವ ಗ್ರಾಮದ ರವಿ ಶಾಬು ಗಸ್ತಿ(33)  ಬಂಧಿತ ಆರೋಪಿ. ಇತನು ಒಸಿ ಕಂಪನಿಯ 20 ಬಾಕ್ಸ್ 26800 ರೂ. ಮದ್ಯವನ್ನು ಕೊಡಗಾನೂರ ರಸ್ತೆಯ ಬದಿಯಲ್ಲಿಅಕ್ರಮವಾಗಿ ಸಂಗ್ರಹಿಸಿಟ್ಟದ್ದ. ಖಚಿತ ಮಾಹಿತಿ ಪಡೆದ ಅಥಣಿ ಪೊಲೀಸರು ರವಿಯನ್ನು  ವಶಪಡಿಸಿಕೊಂಡು ಅಥಣಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಡಿ ವೈ ಎಸ್‌ ಪಿ ಶ್ರೀಪಾದ, ಸಿಪಿಐ ರವೀಂದ್ರ ನಾಯೋಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ ಐ ಶಿವಾನಂದ ಕಾರಜೋಳ ಸಿಬ್ಬಂದಿಗಳಾದ ರಮೇಶ ಹಾದಿಮನಿ, ಶ್ರೀಧರ ಬಾಂಗಿ, ಸಿದ್ರಾಮ ಗಾಣಿಗೇರ ಪ್ರಕಾಶ ಕುರಿ, ಪರಮಾನಂದ ಕಂಟಿಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.//////