Belagavi News In Kannada | News Belgaum

ಲೋಕಸಭಾ ಚುನಾವಣೆ: ಸುಳ್ಳು ಮಾಹಿತಿ ಮುದ್ರಣ ನಿರ್ಬಂಧ

ಬೆಳಗಾವಿ,ಮಾ.22: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಜಿಲ್ಲೆಯಲ್ಲಿ ಮಾದರಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ದ್ವೇಷ ಭಾವನೆ ಕೆರಳಿಸುವಂತಹ ಬ್ಯಾನರ್, ಸುಳ್ಳು ಮಾಹಿತಿಯನ್ನು ಮುದ್ರಿಸಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೋಮುಗಲಭೆ ಸೃಷ್ಟಿಸುವಂತಹ, ದ್ವೇಷ ಭಾವನೆಗಳನ್ನು ಕೇರಳಿಸುವಂತ ಬ್ಯಾನರ್, ಹೋಲ್ಡಿಂಗ್ಸಗಳಾಗಲಿ ಅಥವಾ ಕರಪತ್ರಗಳನ್ನಾಗಲಿ ಮುದ್ರಿಸುವಂತಿಲ್ಲ ಮುದ್ರಿಸಲಾದ ಅಥವಾ ಬಹುಗ್ರಾಫ್ ಮಾಡಲಾದ ಪ್ರತಿಯೊಂದು ಚುನಾವಣಾ ಕರಪತ್ರ, ಫಲಕ, ಭಿತ್ತಿಪತ್ರ, ಅಥವಾ ಫೋಸ್ಟರ್ ಮುಂಭಾಗದಲ್ಲಿ ಮುದ್ರಕನ ಹೆಸರು, ವಿಳಾಸ ಮತ್ತು ಪ್ರಕಾಶಕ ಹೆಸರು, ವಿಳಾಸವನ್ನು ಕಡ್ಡಾಯವಾಗಿ ಹೊಂದಿರಬೇಕು.

ಅಂತಹ ಯಾವುದೇ ಡಾಕ್ಯುಮೆಂಟ್‍ನ ಮುಂದ್ರಣವು ಉದ್ದೇಶಿತ ಪ್ರಕಾಶಕರಿಂದ ಸಹಿ ಮಾಡಲ್ಪಟ್ಟ ಮತ್ತು ಅವನು ವ್ಯಕ್ತಿವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಲ್ಪಟ್ಟ ಅವನ ಗುರುತಿನ ಘೋಷಣೆಯನ್ನು ದ್ವಿ-ಪ್ರತಿಯಲ್ಲಿ ಪಡೆಯಬೇಕು.

ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 ಅಡಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಗಳಾದ ನಿತೇಶ್ ಪಾಟೀಲ ಅವರು ಸೂಚಿಸಿದ್ದಾರೆ.

 

 ಚುನಾವಣೆ: ಮೊದಲ ಹಂತದ ಇವಿಎಂ ಯಾರ್ಂಡಮೈಜೇಷನ್
—————————————–ಮತಕ್ಷೇತ್ರವಾರು ಇವಿಎಂ ಹಂಚಿಕೆ ಪ್ರಕ್ರಿಯೆ ಪೂರ್ಣ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

 

ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇವಿಎಂ ಮತಯಂತ್ರಗಳ ಮೊದಲ ಹಂತದ ಯಾದೃಚ್ಛೀಕರಣ (ಯಾರ್ಂಡಮೈಜೇಷನ್) ಪ್ರಕ್ರಿಯೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಮಾ.22) ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಜೊತೆಗೆ ಯಾರ್ಂಡಮೈಜೇಷನ್ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಯಾರ್ಂಡಮೈಜೇಷನ್ ಪ್ರಕ್ರಿಯೆ ಮೂಲಕ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿಧಾನಸಭಾ ಮತಕ್ಷೇತ್ರವಾರು ಹಂಚಿಕೆ ಮಾಡಲಾಗುವುದು. ಹೀಗೆ ಅಂತಿಮಗೊಳಿಸಲಾದ ಮತಯಂತ್ರಗಳ( ಇವಿಎಂ) ಪಟ್ಟಿಯನ್ನು ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರುಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ, ವಿವಿಧ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರು ಹಾಜರಿದ್ದರು.

5874 ಬಿಯು, ಕಂಟ್ರೊಲ್ ಯುನಿಟ್ ಹಂಚಿಕೆ:
ಇವಿಎಂ ಮತಯಂತ್ರಗಳ ಮೊದಲ ಹಂತದ ಯಾರ್ಂಡಮೈಜೇಷನ್ ಪ್ರಕ್ರಿಯೆ ಮೂಲಕ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಲಭ್ಯವಿರುವ ಮತಯಂತ್ರಗಳನ್ನು ಶೇ.130ರ ಪ್ರಮಾಣದಲ್ಲಿ 5874 ಬ್ಯಾಲೆಟ್ ಯುನಿಟ್; 5874 ಕಂಟ್ರೋಲ್ ಯುನಿಟ್‍ಮತ್ತು 5874 ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಯಿತು.
ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾಗಿರುವ ಮತಯಂತ್ರಗಳನ್ನು ಮುಂದಿನ ಹಂತದ ಯಾರ್ಂಡಮೈಜೇಷನ್ ಸಂದರ್ಭದಲ್ಲಿ ಮತಗಟ್ಟೆವಾರು ಹಂಚಿಕೆ ಮಾಡಲಾಗುತ್ತದೆ.