Belagavi News In Kannada | News Belgaum

ದಾಖಲೆ ಇಲ್ಲದ 8.30 ಲಕ್ಷ ನಗದು ವಶಪಡಿಸಿಕೊಂಡ ಪೊಲೀಸರು.

ರಾಯಚೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಪೊಲೀಸರು ದಾಖಲೆ ಇಲ್ಲದ 8.30 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ..

ರಾಯಚೂರು ತಾಲ್ಲೂಕಿನ ಸಿಂಗನೋಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಮಾರುತಿ ಶಿಫ್ಟ್‌ ಡಿಸೈರ್‌ ಕಾರಿನ ಡಿಕ್ಕಿಯಲ್ಲಿ ಸಾಗಿಸುತ್ತಿದ್ದ ₹ 4 ಲಕ್ಷ, ಯರಗೇರಾ ಚೆಕ್‌ಪೋಸ್ಟ್‌ನಲ್ಲಿ ₹ 1.30 ಲಕ್ಷ ಹಾಗೂ ಸಿಂಧನೂರು ತಾಲ್ಲೂಕಿನ ಮಣ್ಣಿಕೆರೆ ಕ್ಯಾಂಪ್‌ನಲ್ಲಿ ₹ 3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ತಿಳಿಸಿದ್ದಾರೆ.