Belagavi News In Kannada | News Belgaum

ಕಾಂಗ್ರೆಸ್ ಪ್ರಚಾರಕ್ಕೆ ನಟಿ ರಮ್ಯಾ ಎಂಟ್ರಿ

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಸ್ಟಾರ್ ಕಾಂಪೈನರ್ ಗಳ ಲಿಸ್ಟ್ ರೆಡಿಯಾಗಿದೆ. ಈಗ ಸ್ಟಾರ್ ಕಾಂಪೈನರ್ ಗಳ ಪಟ್ಟಿಯಲ್ಲಿ ರಮ್ಯಾ ಹೆಸರೂ ಇದೆ ಎನ್ನಲಾಗಿದೆ.

ನಟಿ ರಮ್ಯಾ ಈ ಹಿಂದೆ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದವರು, ಸಂಸದರಾಗಿಯೂ ಆಯ್ಕೆಯಾಗಿದ್ದರು.
ಆದರೆ ಅದಾದ ಬಳಿಕ ರಮ್ಯಾ ರಾಜಕೀಯ, ಸಿನಿಮಾದಿಂದ ದೂರವುಳಿದಿದ್ದರು. ಈ ನಡುವೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಸ್ಟಾರ್ ಪ್ರಚಾರಕಿಯಾಗಿದ್ದರು.

ಇದೀಗ ರಮ್ಯಾರನ್ನು ಮಂಡ್ಯ ಮತ್ತು ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕರೆತರಲು ಪ್ರಯತ್ನ ನಡೆಸಲಾಗಿದೆ. ರಮ್ಯಾಗೆ ಮಂಡ್ಯ, ಮೈಸೂರು ಭಾಗದಲ್ಲಿ ಜನ ಬೆಂಬಲವಿದೆ. ಯುವ ಮತದಾರರನ್ನು ಸೆಳೆಯಲು ಅವರು ಸೂಕ್ತ ಎಂಬ ಕಾರಣಕ್ಕೆ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಗೆ ಸೇರಿಸಲಾಗಿದೆ.

ರಮ್ಯಾ ಈ ಮೊದಲು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ರಮ್ಯಾ ಬದಲು ಸ್ಟಾರ್ ಚಂದ್ರುಗೆ ಮಣೆ ಹಾಕಲಾಯಿತು. ಇದೀಗ ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಪ್ರಚಾರಕಿಯಾಗಿ ಬಳಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ.//////