Belagavi News In Kannada | News Belgaum

ಬೆಳಗಾವಿಯಲ್ಲಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಪ್ರತಿಭಟನೆ

ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಸುತ್ತಿರುವುದನ್ನು ವಿರೋಧಿಸಿ ರೈತರು ಬೆಳಗಾವಿ ಚನ್ನಮ್ಮನ ವೃತ್ತ ಬಳಿ ರೈತ ಮಹಿಳಯರು ಉರುಳು ಸೇವೆ ಮಾಡಿ ತೀವ್ರ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ‌ ಸರ್ಕಾರಕ್ಕೆ ಮನವಿ ಸಲ್ಲಿಸಿದರು .

ಇದಕ್ಕೂ ಮೊದಲು ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ರೈತರ ಪ್ರತಿಭಟನೆಗೆ ಎಂ ಇ ಎಸ್ ‌ಮುಖಂಡ ರಮಾಕಾಂತ್ ಕೊಂಡುಸ್ಕರ್ ಸಾಥ್ ನೀಡಿದ್ದರು. ಹಲಗಾ, ಹಳೇ ಬೆಳಗಾವಿ, ಮಾಧವಪುರ, ವಡಗಾಂವ, ,ಆನಗೋಳ, ಮಜಗಾಂವ, ಯಳ್ಳೂರ, ಮಚ್ಛೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಮನವಿ ಸಲ್ಲಿಸಿದರು .

ನೇಗಿಲ ಯೋಗಿ ರೈತ ಸಂಘದ ರವಿ ಪಾಟೀಲ್ ಮಾತನಾಡಿ ಫಲವತ್ತಾದ ಭೂಮಿ ಇದೆ. ಹಲಗಾ ಮಚ್ಚೆ ಕಾಮಗಾರಿ ಕಾನೂನು ಬಾಹಿರವಾಗಿದೆ ,1 ಎಕರೆ ಭೂಮಿ ಹೊಂದಿರುವ ಬಡ ರೈತರು ಇದ್ದಾರ ,ಅಕ್ರಮವಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ , ರೈತ ಕುಲವನ್ನು ವಿರೋಧಿಸಿದ ಯಾರೂ ಕೂಡ ರಾಜಕಾರಣಿಗಳು ಯಾರೂ ಉಳಿಯುವುದಿಲ್ಲ , ರಾಜ್ಯ ಸರ್ಕಾರ ಕೂಡ ನುಡಿದಂತೆ ನಡೆಯದೆ ಅಂಥಹಾ ಸುಳ್ಳು ಹೇಳುತ್ತೀದ್ದೆ , ರಾಜ್ಯದಲ್ಲಿ ಎಲ್ಲಾ ವಸ್ತುಗಳು ದುಬಾರಿ ಮಾಡಲಾಗಿದೆ ,ಮದ್ಯದ ದರ ಕೂಡ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು .
ರೈತ ಮುಖಂಡ ರಾಜು ಮರ್ವೇ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡು ರೈತರಿಗೆ ಅನ್ಯಾಯ ಮಾಡುತ್ತೀದ್ದಾರೆ , ಬೆಳಗಾವಿಯ 9 ಗ್ರಾಮಗಳ ರೈತರು ಹಲಗಾ ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ಮಾಡುತ್ತೀದ್ದವೇ 2019 ರಿಂದ ಇಲ್ಲಿಯವರಗೂ ವಿರೋಧ ಮಾಡಿಕೊಂಡು ಬಂದಿವೆ ,ಅಧಿಕಾರಿಗಳು ಹೈಕೋರ್ಟ್ ನ ನಕಲಿ ಪತ್ರ ತೋರಿಸಿ ಕಾಮಗಾರಿ ಆರಂಭಿಸಿದ್ದಾರೆ ,ರಾಜ್ಯ ಸರ್ಕಾರ ಕೊಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು .
ಪ್ರತಿಭಟನೆಯಲ್ಲಿ ಹಲಗಾ, ಹಳೇ ಬೆಳಗಾವಿ, ಮಾಧವಪುರ, ವಡಗಾಂವ, ,ಆನಗೋಳ, ಮಜಗಾಂವ, ಯಳ್ಳೂರ, ಮಚ್ಛೆ ರೈತರು  ಭಾಗವಹಿಸಿದ್ದರು./////