Belagavi News In Kannada | News Belgaum

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ತಾತ್ಕಾಲಿಕ ಪ್ರವಾಸ ಪಟ್ಟಿ

ಬೆಳಗಾವಿ,ಮಾ.26 : ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಮಾ.25 ರಿಂದ ಮಾ.31ರ ವರೆಗೆ ಜಿಲ್ಲೆಯಲ್ಲಿ ತಾತ್ಕಾಲಿಕ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಮಾ. 27 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಕಚೇರಿಯ ಕೆಲಸದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಅನಾಧಿಕೃತ ನಗದು ಜಪ್ತಿ ಸಮಿತಿ ಸಭೆ; ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಗೂಗಲ್ ಮಿಟ್‍ನಲ್ಲಿ ಸಭೆ: ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದ ಜರಗುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಾ. 27 ರಂದು ಬೆಳಗ್ಗೆ 10 ರಿಂದ 1 ಗಂಟೆಗೆ ಕಚೇರಿ ಕೆಲಸ; ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕುರಿತು ಚುನಾವಣೆ ಕಾರ್ಯ ನಡೆಸಲಿದ್ದಾರೆ.
ಮಾ.28 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕುರಿತು ಚುನಾವಣೆ ಕೆಲಸ ನಡೆಸಲಿದ್ದಾರೆ.
ಮಾ. 30 ರಂದು ಬೆಳಗ್ಗೆ 11 ರಿಂದ 12ವರೆಗೆ ಜಿಲ್ಲಾಧಿಕಾರಿಗಳು ಇವರ ಅಧ್ಯಕ್ಷತೆಯಲ್ಲಿ ಹಸಿರುಕ್ರಾತಿ ಹರಿಕಾರ ಡಾ.ಬಾಬು ಜಗಜೀವನರಾಮ ಅವರ 117ನೇ ಜನ್ಮ ದಿನಾಚರಣೆ ಆಚರರಿಸುವ ಸಂಬಂಧ ಪೂರ್ಣ ಭಾವಿ ಸಭೆ; ಮಧ್ಯಾಹ್ನ 1 ರಿಂದ 2 ವರೆಗೆ ಜಿಲ್ಲಾಧಿಕಾರಿಗಳಿ ಅವರ ಅಧ್ಯಕ್ಷತೆಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ ಆಚರಿಸುವ ಸಂಬಂಧ ಪೂರ್ವ ಭಾವಿ ಸಭೆ; ಮಧ್ಯಹ್ನ 3 ರಿಂದ ಸಂಜೆ 6 ರವರೆಗೆ ಗ್ರಮ ಪಂಚಾಯತ ಸಿಬ್ಬಂದಿಗಳ ಮೇಲ್ಮನವಿ ಕುರಿತು ಚರ್ಚೆ ಹಾಗೂ ಪಿಡಿಓ ಜಿ1, ಜಿ2, ಎರಡನೇ ವಿಭಾಗಿ ಸಹಾಯಕರ ಇಲಾಖೆಯ ವಿಚಾರಣೆ(SDAA); ಮಾ.31 ರಂದು ಸಾರ್ವತ್ರಿಕ ರಜೆ ಇರುತ್ತದೆ ಪ್ರಕಟಣೆ ತಿಳಿಸಿದೆ.