Belagavi News In Kannada | News Belgaum

ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು: ಮಹಾಂತೇಶ ಭಜಂತ್ರಿ

ಬೆಳಗಾವಿ,ಮಾ.26 : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನೀಡುವ ಈ ತರಬೇತಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು/ಅಧಿಕಾರಿಗಳಿಗೆ ಹಾಗೂ ಶುಶ್ರೂಷಕಿಯರಿಗೆ ತುಂಬಾ ಮಹತ್ವವಾಗಿದ್ದು, ದತ್ತು ಅಧಿನಿಯಮ ಕಾಯ್ದೆ-2022ರ ತಿದ್ದುಪಡಿಯು ತುಂಬಾ ಮಹತ್ವವಾಗಿದ್ದು, ಈ ವಿಷಯದ ಬಗ್ಗೆ ಎಲ್ಲ ಶಿಭಿರಾರ್ಥಿಗಳು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಅಶೋಕ ಕುಮಾರ ಶೆಟ್ಟಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಮಾ. 21 ರಂದು ನಿರ್ದೇಶನಾಲಯದಲ್ಲಿ ದತ್ತು ಅದಿನಿಯಮ ಕಾಯ್ದೆ-2022ರ ಹಾಗೂ ಮಮತೆಯ ತೊಟ್ಟಿಲು ಮತ್ತು 18 ವರ್ಷದೊಳಗಿನ ಗರ್ಭಿಣಿಯರಿಗೆ ಮಕ್ಕಳ ರಕ್ಷಣಾ ಸೌಲಭ್ಯಗಳ ಕುರಿತು ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ, ಅಧಿಕಾರಿಗಳಿಗೆ, ಶುಶ್ರೂಷಕಿಯರಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಮಾತನಾಡಿ, ಭಾವಿ ದತ್ತು ತಂದೆ ತಾಯಂದಿರು ಕಾನೂನು ಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕು ಸವಲತ್ತುಗಳು ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯವನ್ನು ದತ್ತು ಸ್ವೀಕಾರ ಮಾಡಬೇಕು. ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕು,್ಕ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ ಪರಿತ್ಯಕ್ತ ನಿರ್ಗತಿಕ ಮಕ್ಕಳ ಪುನರ ವಸತಿಗೆ ನೆರವಾಗುವ ಒಂದು ಸೂಕ್ತ ಕಾರ್ಯಕ್ರಮವಾಗಿದೆ ಎಂದರು.

ಕಾನೂನು ಬಾಹಿರ ದತ್ತು ಆಗುವುದಿಲ್ಲಾ ನಿಮ್ಮ ಸ್ವತ್ತು ಕಾನೂನುನಡಿ ಪಡೆದ ದತ್ತು ಜೀವನವಿಡೀ ಸುಖದ ಸಂಪತ್ತು ಮಕ್ಕಳನ್ನು ಮಾರುವುದು, ಕೊಳ್ಳುವುದು ಅಥವಾ ಕಾನೂನು ಬಾಹಿರ ದತ್ತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಾನೂನು ರೀತಿ ಶಿಕ್ಷಾರ್ಹ ಅಪರಾದ ಒಂದು ವೇಳೆ ಈ ಅಪರಾಧದಲ್ಲಿ ಬಾಗಿಯಾದಲ್ಲಿ 05 ವóರ್ಷದವರಿಗೆ ಕಠಿಣ ಶಿಕ್ಷೆ ಹಾಗೂ ರೂ. 1.00 ಲಕ್ಷ ದಂಡ. ಆಸ್ಪತ್ರೆ ಸಿಬ್ಬಂದಿಗಳು ಬಾಗಿಯಾದಲ್ಲಿ 07 ವóರ್ಷದವರಿಗೆ ಕಠಿಣ ಶಿಕ್ಷೆ ಹಾಗೂ ರೂ. 1.00 ಲಕ್ಷ ದಂಡ. ಇರುತ್ತದೆ ಹಾಗೂ ಮಮತೆಯ ತೊಟ್ಟಿಲು ಕಾರ್ಯಕ್ರಮವು ತುಂಬಾ ಮಹತ್ವವಾಗಿದೆ ಎಂದರು.

ಮಗು ಬೇಡವಾದಲ್ಲಿ ಕಸದ ತೊಟ್ಟಿ ,ಆಸ್ಪತ್ರೆ ಆವರಣಾ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಬಿಸಾಡಿ ಎಳೆಯ ಜೀವಗಳನ್ನು ಹಿಂಸಿಸಬೇಡಿ, ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ. ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿರುತ್ತದೆ ಹಾಗೂ 1989 ನವೆಂಬರ್ 20 ರಂದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಡಿಕೆ ಜಾರಿ ಮಾಡಿದ್ದು, ಮಕ್ಕಳ ಹಿತರಕ್ಷಣೆ ಕಾರ್ಯಕ್ಷೇತ್ರಕ್ಕೆ ಮುಖ್ಯಬೆಂಬಲ ಹಾಗೂ ಚಿಂತನೆ ನೀಡಿದ್ದು ಮಕ್ಕಳೇ ದೇಶದ ಆಸ್ತಿ ಮತ್ತು 196 ದೇಶಗಳು ಈ ಒಡಂಬಿಕೆಗೆ ಸಹಿ ಹಾಕಿದ್ದು, ಅತೀ ಹೆಚ್ಚು ದೇಶಗಳು ಸಹಿ ಮಾಡಿದ ಐತಿಹಾಸಿಕ ಒಡಂಬಡಿಕೆಯಾಗಿದೆ ಎಂದು ಮಹಾಂತೇಶ ಭಜಂತ್ರಿ ಅವರು ಹೇಳಿದರು.

ಇಂದಿನ ಮಕ್ಕಳೇ ಇಂದಿನ ದೇಶದ ಪ್ರಜೆಗಳು, ಈ ದೇಶದ ಭವಿಷತ್ತು ತಮ್ಮ ಹಕ್ಕುಗಳನ್ನು ಪ್ರತಿದಿನ ಅನುಭವಿಸುವಂತಾಗಬೇಕು. ಆದ್ದರಿಂದ ಈ ದೇಶ ಅಭಿವೃಧ್ಧಿ ಹೊಂದ ಬೇಕಾದರೆ ನಮ್ಮ ಮಕ್ಕಳ ಅಭಿವೃಧ್ಧಿ ಹೊಂದಬೇಕು. ಯಾವ ಮಕ್ಕಳು ಸಹ ರಕ್ತ ಹಿನತೆಯಿಂದ, ಮಾನಸಿಕ ಕಾಯಿಲೆಗಳಿಂದ, ಇತರೆ ಯಾವುದೇ ಖಾಯಿಲೆಗಳಿಂದ ಬಳಲಬಾರದು ಹಾಗೂ ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾರಾದರು ಅನಾಥ ಏಕಪೋಷಕ, ಪರಿತ್ಯಕ್ತ ಮಕ್ಕಳು, ಬಾಲಕಾರ್ಮಿಕ ವಿಶೇಷ ನೂನ್ಯತೆ ಹೊಂದಿರುವವರು, ಜೈಲು ಖೈದಿವಾಸಿ ಮಕ್ಕಳು, ಸಾಂಕ್ರಾಮಿಕ ರೋಗಳನ್ನು ಹೊಂದಿರುವ ಮಕ್ಕಳು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿ ನಾವು ನಿಮ್ಮ ಸೇವೆಗೆ 24/07ಘಂಟೆಗಳ ಕಾಲ ಸದಾ ಸಿದ್ದರಿದ್ದೇವೆ. ಯಾವ ಮಕ್ಕಳು ಸಹ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ತಿಳಿಸಿದರು.

ಬೇಳಗಾವಿಯ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಸರೋಜಾ ತಿಗಡಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮಕ್ಕಳಿಗೆ ಯಾವುದೇ ಸ್ಥಳದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಬಹಳ ಹತ್ತಿರ ಇರುವ ಜನರಿಂದ ಮಕ್ಕಳ ಮೇಲೆ ತೊಂದರೆ, ದೌರ್ಜನ್ಯ ಆಗುತ್ತಿರುವುದು ಕಂಡು ಬರುತ್ತಿದೆ. ಮಕ್ಕಳು ಸರಿಯಾದ ರೀತಿಯಲ್ಲಿ ಆಹಾರ ಸೇವಿಸುತ್ತಿಲ್ಲ. ಆದ್ದರಿಂದ ಸಾಕಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯದಲ್ಲಿ ಪೌಷ್ಠಿಕಾಂಶ ತುಂಬಾ ಕಡಿಮೆ ಇರುತ್ತದೆ.

ಆದ್ದರಿಂದ ಎಲ್ಲ ಮಕ್ಕಳು ಒಳ್ಳೆಯ ಪೌಷ್ಠಿಕ ಆಹಾರವಾದ ಮೊಳಕೆ ಬಂದಿರುವ ಕಾಳುಗಳು, ಹಾಲು, ಹಣ್ಣು, ಹಸರು ತರಕಾರಿ, ದ್ರಾಕ್ಷಿ, ಗೊಡಂಬಿ, ಕಜೂರ, ಶೇಂಗಾ, ಬೆಲ್ಲ ಹೀಗೆ ಮಕ್ಕಳ ಆರೋಗ್ಯದಲ್ಲಿ ಶಕ್ತಿ ಬರುವ ಆಹಾರವನ್ನು ಕೊಡಬೇಕು ಅಂದಾಗ ಮಾತ್ರ ಮಕ್ಕಳು ದೈಹಿಕವಾಗಿ ಸದೃಢವಾಗಿರುತ್ತಾರೆ. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಹಾಗೂ ಮಾತ್ರೆಗಳನ್ನು/ಟಿಟಿ ಇಂಜಕ್ಸನ್ ತೆಗೆದುಕೊಂಡು ಸರಿಯಾಗಿ ತಮ್ಮ ಆರೋಗ್ಯ ಕಾಪಾಡಿಕೊಂಡು “ಆರೋಗ್ಯವೇ ಭಾಗ್ಯ” ಎಂಬ ನಾನ್ನುಡಿಯಂತೆ ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಈರಣ್ಣಾ ಪಲ್ಲೇದ ಮಾತನಾಡಿ, ಇತ್ತೀಚಿನ ದಿನದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕಾರ್ಯ ಮಾಡಬೇಕಿದೆ. ಇತ್ತೀಚೆಗೆ 15-16 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಿಣಿಯಾಗುತ್ತಿದ್ದು, ಅವರ ಗರ್ಭಕೋಶ ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ, ಅವರ ಹೆರಿಗೆ ಸಮಯದಲ್ಲಿ ಸಾಯುವ ಸಂದರ್ಭ ಇರುತ್ತದೆ.

ಅವರಿಗೆ ಮುಂದೆ ಜನಿಸುವ ಮಕ್ಕಳು ಅಪೌಷ್ಠಿಕತೆಯಿಂದ ರಕ್ತಹೀನತೆಯಿಂದ ದೈಹಿಕವಾಗಿ ಅಂಗವಿಕಲತೆಯಿಂದ ಮಾನಸಿಕವಾಗಿ ಅಸ್ಥವ್ಯಸ್ಥ ನ್ಯೂನ್ಯತೆಯಿಂದ ಜನಿಸುವ ಸಾಧ್ಯತೆ ತುಂಬಾ ಇರುತ್ತದೆ. ಆದ್ದರಿಂದ ಹೆಣ್ಣುಮಕ್ಕಳಿಗೆ 18 ವರ್ಷ ಮುಗಿಯುವವರೆಗೆ ವಿವಾಹ ಮಾಡಬಾರದು ಎಂದು ಹೇಳಿದರು.

ರಮೇಶ ಕೊರಿದರು, ಮಕ್ಕಳ ಸಹಾಯವಾಣಿ ಸಂಯೋಜಕರು ಮಲ್ಲಪ್ಪಾ ಕುಂದರಗಿ, ಮಹೇಶ ಸಂಗಾನಟ್ಟಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಶುಶ್ರೂಷಕಿಯರಿಗೆ” ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.