Belagavi News In Kannada | News Belgaum

ಪತ್ನಿಯ ಅನೈತಿಕ‌ ಸಂಬಂಧ ಬೇಸತ್ತು ಪತಿ ಆತ್ಮಹತ್ಯೆ..!

ಬೆಂಗಳೂರು:  ಪತ್ನಿಯ ಅನೈತಿಕ‌ ಸಂಬಂಧ ಮತ್ತು ವಿಚ್ಛೇದನ ಪಡೆಯಲು 5 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆ ಪತಿ ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದಿದೆ..

ಪತ್ನಿಯ ಕಿರುಕುಳ ತಾಳಲಾಗದೆ ಗೋಡೆ ಮೇಲೆಯೇ ಡೆತ್ ನೋಟ್ ಬರೆದು ಪತಿ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಸೈಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆಗೆ ಶರಣಾದ ಪತಿ. ಘಟನೆ ಸಂಬಂಧ ಪತ್ನಿ ಖತೀಜತುಲ್ ಕುಬ್ರಾ, ಮಾವ ಮುನಾವರ್ ಸುಬಾನ್, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಾಗಿದೆ.