Belagavi News In Kannada | News Belgaum

ನಾಳೆ ಕುಂದಾನಗರಿಗೆ ಶೆಟ್ಟರ್ ಎಂಟ್ರಿ..

ಬೆಳಗಾವಿ:  ನಾಳೆ  ಬೆಳಗ್ಗೆ 10 ಘಂಟೆಗೆ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೊಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೀರೆಬಾಗೆವಾಡಿ ಟೋಲ್ ಮೂಲಕ ಬೆಳಗಾವಿ ಲೊಕಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಲಿದ್ದಾರೆ..

ಬೆಳಗ್ಗೆ 10ಘಂಟೆಗೆ ಹೀರೆಬಾಗೆವಾಡಿ ಟೊಲ್ ಮೂಲಕ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿ 10.30ಕ್ಕೆ ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ, ನಂತರ ಬೈಕ್ ಸವಾರರು ಅವರಿಗೆ ಸಾಥ ನೀಡಲಿದ್ದು ಅಲ್ಲಿಂದ ಕೊರ್ಟ್ ಆವರಣದಲ್ಲಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ, ರಾಣಿ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನ ಮೂರ್ತಿಗೆ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ, ಗಣಪತಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮವೀರ

ಸಂಭಾಜಿ ವೃತ್ತದಲ್ಲಿ ಮೂರ್ತಿಗೆ ಮಾಲಾರ್ಪಣೆ, ಕಪಲೇಶ್ವರ ಮೆಲ್ಸೆತುವೆ ಮಾರ್ಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ, ಮಹಾತ್ಮಾ ಪುಲೆ‌ ಮಾರ್ಗವಾಗಿ ಗೋವಾವೆಸ್ ದಲ್ಲಿರುವ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ನಡೆಸಿ ಸದಾಶಿವ ನಗರದಲ್ಲಿರುವ ಮಹಾನಗರ ಕಛೇರಿಯವರೆಗೆ ಬೈಕ್ ರ್ಯಾಲಿ ನಡೆಯಲಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.