Belagavi News In Kannada | News Belgaum

ಲಂಚ ಪಡೆಯುತ್ತಿದ್ದ ಪಂಚಾಯತ ರಾಜ್ ಅಭಿಯಂತರರ ಬಂಧನ

ಬೆಳಗಾವಿ,ಮಾ.26: ಆಪಾದಿತ ಅಧಿಕಾರಿಯು ಮಾ. 26 ರಂದು ತನ್ನ ಕೊಠಡಿಯಲ್ಲಿ ಫಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಸದರಿ ಸಹಾಯಕ ಕಾರ್ಯಪಾಲಕ ಅಭಿಯಂತರ, ಪಂಚಾಯತ ರಾಜ್ ಉಪವಿಭಾಗ ಖಾನಾಪೂರ ದುರದುಂಡೇಶ್ವರ ಬನ್ನೂರ ರವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.
ಸದರಿ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದುರದುಂಡೇಶ್ವರ ಮಹಾದೇವ ಅವರು ಫಿರ್ಯಾದಿ ವಿನಾಯಕ ಮುತಗೇಕರ ರವರಿಗೆ ರೂ. 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಫಿರ್ಯಾದಿದಾರರು ಆಪಾದಿತ ಅಧಿಕಾರಿಯ ಲಂಚ ಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ಮಾಡಿ ದುರದುಂಡೇಶ್ವರ ಬನ್ನೂರ ಅವರನ್ನು ಬಂಧಿಸುವಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಾಂಜಳೆ ಗ್ರಾಮದ ಸದಸ್ಯನಾಗಿರುವ ನೀಲಾವಡೆ ಗ್ರಾಮ ಪಂಚಾಯತಿಯ 2ನೇ ವಾರ್ಡನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಮಂಜೂರಾತಿ ಪಡೆಯುವ ಕುರಿತು ನೀಲಾವಡೆ ಗ್ರಾಮ ಪಂಚಾಯತಿಯಿಂದ ಪಂಚಾಯತ ರಾಜ್ ಇಂಜಿನೀಯರಿಂಗ ಉಪವಿಭಾಗ, ಖಾನಾಪೂರ ಕಛೇರಿಗೆ ಆನಲೈನ್ ಮುಖಾಂತರ ಕಳುಹಿಸಲಾಗಿತ್ತು.

ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಹನಮಂತರಾಯ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ, ಭರತ್. ಎಸ್. ಆರ್, ಪೊಲೀಸ್ ಇನ್ಸ್‍ಪೆಕ್ಟರ್ ರವಿಕುಮಾರ ಧರ್ಮಟ್ಟಿ, ಉಸ್ಮಾನ ಅವಟಿ, ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ವಿಠ್ಠಲ ಬಸಕ್ರಿ, ಸಂತೋಷ ಬೇಡಗ, ಗಿರೀಶ ಪಾಟೀಲ, ಲಗಮಣ್ಣಾ ಹೊಸಮನಿ, ಬಸವರಾಜ ಹುದ್ದಾರ, ಬಸವರಾಜ ಕೊಡೊಳ್ಳಿ ತಂಡದವರಿಂದ ಕೈಗೊಳ್ಳಲಾಗಿರುತ್ತದೆ ಎಂದು ಕರ್ನಾಟಕ ಲೋಕಯುಕ್ತ ಬೆಳಗಾವಿ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.