Belagavi News In Kannada | News Belgaum

ಬೆಳಗಾವಿ: ಕರ್ತವ್ಯದಲ್ಲಿದ್ದಾಗಲೇ ಗಡದ್ದಾಗಿ ನಿದ್ದೆ ಹೊಡೆದ ಅಧಿಕಾರಿ

ಚಿಕ್ಕೋಡಿ: ಅಸಿಸ್ಟೆಂಟ್ ಎಂಜಿನಿಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಗಡದ್ದಾಗಿ ನಿದ್ದೆ ಹೊಡೆಯುತ್ತಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ನೀರಾವರಿ ಉಪವಿಭಾಗದ ಕಚೇರಿಯಲ್ಲಿ ನಡೆದಿದೆ.

ಒಂದು ಕಡೆ ಭೀಕರ ಬರಗಾಲದಿಂದ ರೈತಾಪಿ ವರ್ಗ ತತ್ತರಿಸಿದೆ. ಹೀಗಿರುವಾಗ ಅಸಿಸ್ಟೆಂಟ್ ಎಂಜಿನಿಯರ್ ವರ್ತನೆ ಎಲ್ಲರ ಕೋಪಕ್ಕೆ ಕಾರಣವಾಗಿದೆ. ಘಟಪ್ರಭಾ ಎಡದಂಡೆ ಕಾಲುವೆ ಉಪವಿಭಾಗ ರಾಯಬಾಗ ಕಚೇರಿಯಲ್ಲಿ ಘಟನೆ ಇದಾಗಿದ್ದು, ಅಸಿಸ್ಟೆಂಟ್ ಎಂಜಿನಿಯರ್ ಸಂಜಯಕುಮಾರ್ ಅಮ್ಮಿನಭಾವಿ ಎಂಬ ಅಧಿಕಾರಿ ಕಚೇರಿಯಲ್ಲಿ ಗಡದ್ದಾಗಿ ನಿದ್ದೆ ಹೊಡೆದಿದ್ದಾರೆ.
ಇನ್ನು ಕಚೇರಿಯಲ್ಲಿ ನಿದ್ದೆ ಮಾಡಬೇಡಿ ಎಂದು ಮುಖ್ಯ ಎಂಜಿನಿಯರ್ ಅನೇಕ ಬಾರಿ ಹೇಳಿದ್ದಾರಂತೆ. ಆದರೂ ಸಹ ಅವರ ಮಾತು ಕೇಳದೆ ಸಂಜಯಕುಮಾರ್ ನಿದ್ದೆ ಮಾಡುತ್ತಿದ್ದರು. ಇದೀಗ ಅಧಿಕಾರಿಯ ಬೇಜವಾಬ್ದಾರಿ ನಡೆಗೆ ರೈತಾಪಿ ವರ್ಗ ಆಕ್ರೋಶ ಹೊರಹಾಕಿದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂದು ಹೇಳಿದ್ದಾರೆ.