Belagavi News In Kannada | News Belgaum

ಅಭಿವೃದ್ಧಿಗೆ ಕೈ ಪಕ್ಷಕ್ಕೆ ಮತ ನೀಡಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಬೆಳಗಾವಿ: ಮೇ 7 ರಂದು ನಡೆಯುವ ಮತದಾನದಲ್ಲಿ ಅತೀ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ನಮ್ಮ ಸಹೋದರಿ ಗೆಲ್ಲುವಂತೆ ಮಾಡಲು ಕಾರ್ಯಕರ್ತರು  ಹಾರೈಸಬೇಕೆಂದು ಮತದಾರರಲ್ಲಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ವಿನಂತಿಸಿದರು.

ಚಿಕ್ಕೋಡಿ ಲೋಕಸಭಾ ಚುನಾವಣೆ ನಿಮಿತ್ಯ ರಾಯಬಾಗ ವಿಧಾನಸಭಾ ಕ್ಷೇತ್ರದ ನಿಪನಾಳ, ಮಂಟೂರ, ಬೆಂಡವಾಡ ಜೋಡಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಮನೆಯ ಮಗಳಾದ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಯಾಗಿ ಸ್ಪರ್ಧಿಸುತ್ತಿದ್ದು, ತಾವೇಲ್ಲರೂ ಆಶೀರ್ವಾದ ಮಾಡಬೇಕು ಎಂದ ಅವರು. “ನಮ್ಮ ಸರ್ಕಾರ ಬಡವರ ಪರವಾಗಿದ್ದು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ಘೋಷಿಸಿದ್ದ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ, ಇದು ನಮ್ಮ ಸರ್ಕಾರದ ಹೆಗ್ಗಳಿಕೆಯಾಗಿದೆ” ಎಂದರು.

ಕಾಂಗ್ರೆಸ್ ಯಾವಾಗಲೂ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ವಿವಿಧ ಸಮುದಾಯಗಳು ಮತ್ತು ಧಾರ್ಮಿಕ ಗುಂಪುಗಳಿಗೆ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ. ಇದು ನಿರಂತರವಾಗಿ ಸಮಾಜವನ್ನು ಧಾರ್ಮಿಕ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸುವ ಬಿಜೆಪಿಗೆ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ನಿಪನಾಳ ಗ್ರಾಮಕ್ಕೆ ಆಗಮಿಸಿದ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರನ್ನು ಗ್ರಾಮದ ಮಹಿಳೆಯರು  ಆರತಿ ಎತ್ತಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ  ಮಹಾವೀರ ಮೋಹಿತೆ, ಅಪ್ಪಾಬ ಕುಲಗೋಡ,  ಅಬ್ಲುಲ್ಸತ್ತಾರ ಮುಲ್ಲಾ,  ಡಾ. ಎಸ್. ಎ. ಮಗದುಮ್ಮ, ದಲೀಪ ಜಮಾದಾರ, ನಾಮದೇವ ಕಾಂಬಳೆ, ರಾಜು ಕೋಟಗಿ, ಶ್ರವಣ ಕಾಂಬಳೆ, ಅರ್ಜುನ ಬಂಡಿಗಾರ ಸೇರಿದಂತೆ  ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.//////