Belagavi News In Kannada | News Belgaum

ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಿ: ಜಿಪಂ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ

ಹುಕ್ಕೇರಿ: ವಿಶ್ವದಲ್ಲಿಯೇ ಅತಿ ದೊಡ್ಡ ಚುನಾವಣೆಯೆಂದರೆ ಅದು ನಮ್ಮ ಲೋಕಸಭೆ ಚುನಾವಣೆ. ಇಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಯೂ ಆದ ಸಹಾಯಕ ಚುನಾವಣಾಧಿಕಾರಿ ರೇಖಾ ಡೊಳ್ಳಿನವರ ಹೇಳಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಸ್ವೀಪ್ ಸಮಿತಿಯು ಮತದಾನ ಜಾಗೃತಿಗೆ ಏರ್ಪಡಿಸಿದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಪ್ರಜಾಪ್ರಭುತ್ವ ನಿರ್ಮಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಮತದಾರರಿಗೆ ಯಾವುದೇ ರೀತಿಯ ದೂರು ಹಾಗೂ ದುಷ್ಕೃತ್ಯಗಳು ಕಂಡು ಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಸಲು ಅವಕಾಶವಿದೆ. ಮತದಾನ ದಿನದಂದು ಸಮಯ ವ್ಯರ್ಥ ಮಾಡದೇ ಮತದಾನ ಮಾಡಿ ಸುಭದ್ರ ದೇಶ ನಿರ್ಮಿಸಬೇಕು ಎಂದು ಅವರು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರು ಮತದಾನ ಜಾಗೃತಿ ಕುರಿತಾದ ಭಿತ್ತಿ ಪತ್ರ, ಫಲಕಗಳ ಪ್ರದರ್ಶಿಸಿ ಗಮನ ಸೆಳೆದರು. ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಸ್ತೆಯುದ್ದಕ್ಕೂ ಚುನಾವಣಾ ಪರ್ವ ದೇಶದ ಗರ್ವ ಘೋಷವಾಕ್ಯಗಳನ್ನು ಮೊಳಗಿಸಿ ಮತದಾನದ ಜಾಗೃತಿ ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಶಂಭುಲಿAಗ ಕನ್ನೆ, ತಾಪಂ ಯೋಜನಾಧಿಕಾರಿ ಪ್ರಶಾಂತ ಮುನ್ನೊಳಿ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಸಹಾಯಕ ನಿರ್ದೇಶಕರಾದ ಪಿ.ಲಕ್ಷಿö್ಮÃನಾರಾಯಣ, ರಾಜು ಢಾಂಗೆ, ಲೆಕ್ಕ ವಿಭಾಗದ ಮುಖ್ಯಸ್ಥ ರಾಜು ವಂಜೀರೆ, ವಸತಿ ಯೋಜನೆಯ ಶಂಕರ ಕಾಂಬಳೆ, ಮಹಾಂತೇಶ ನಾಯಿಕ, ವಿಶ್ವನಾಥ ಹಿರೇಮಠ, ಶಿವಕುಮಾರ ನಾಯಿಕ, ದೇವಾನಂದ ನವಲೆ, ರಾಘವೇಂದ್ರ ಭರಮನ್ನವರ, ಪಿಡಿಒಗಳಾದ ಪಿ.ಆರ್.ನೇರ್ಲಿ, ಶೀಲಾ ತಳವಾರ, ನಿರಂಜನ ಕುರಬೇಟ, ಎಂಐಎಸ್ ಸಂಯೋಜಕ ಶಂಕರ ಶಿರಗುಪ್ಪಿ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ, ಐಇಸಿ ತಾಲೂಕಾ ಸಂಯೋಜಕ ಮಹಾಂತೇಶ ಬಾದವನಮಠ ಮತ್ತಿತರರು ಉಪಸ್ಥಿತರಿದ್ದರು.//////