Belagavi News In Kannada | News Belgaum

ರೇಣುಕಾ‌ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಶ್ರೀ ರೇಣುಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ ಜಗದೀಶ್ ಶೆಟ್ಟರ್

ಬೆಳಗಾವಿ:  ಬೆಳಗಾವಿ_ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ರವರು  ಸವದತ್ತಿಯ ಶ್ರೀ ರೇಣುಕಾ‌ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಶ್ರೀ ರೇಣುಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು

ಶ್ರೀ ರೇಣುಕಾ ದೇವಿ ದೇವಸ್ಥಾನವು ಸವದತ್ತಿಯ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು.

 

ಇದು ಬೆಳಗಾವಿ ಜಿಲ್ಲೆಯ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ. ತಾಯಿಯ ಆಶೀರ್ವಾದ ಸರ್ವರಿಗೂ ದೊರೆಯಲಿ , ನಾಡು ಸಮೃದ್ಧವಾಗಿ ಬೆಳೆಯಲಿ ಎಂದು ಸಂಕಲ್ಪ ಮಾಡಿದರು.

 

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್,ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ ಪಾಟೀಲ್, ಮುಖಂಡರಾದ ಶ್ರೀಮತಿ ರತ್ನ ಮಾಮನಿ, ಶ್ರೀ ವಿರೂಪಾಕ್ಷ ಮಾಮನಿ,

ಶ್ರೀ ಮುರುಗೇಂದ್ರ ಪಾಟೀಲ್, ಶ್ರೀ ಕೆ.ಪಿ. ಪಾಟೀಲ್, ಶ್ರೀ ಎಸ್.ಆರ್. ಸಿದ್ದನಗೌಡ್ರ, ಶ್ರೀ ವಿರೂಪಾಕ್ಷ ಹಣಸಿ, ಶ್ರೀ ಬಸಪ್ಪ ಸಿದ್ದಕ್ಕನವರ, ಶ್ರೀ ಎಲ್ಲಪ್ಪ ಕಾಳನ್ನವರ, ಶ್ರೀ ಕೃಷ್ಣಪ್ಪ ಲಮಾಣಿ, ಸೇರಿದಂತೆ ಸವದತ್ತಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು..

 

ಬೆಳಗಾವಿ_ಲೋಕಸಭಾ