Belagavi News In Kannada | News Belgaum

ಏ.3ರಂದು ಮಂಡ್ಯದಲ್ಲೇ ರಾಜಕೀಯ ನಿರ್ಧಾರ : ಸಮಲತಾ ಮತ್ತೆ ಸಿಡಿಗುಂಡು

ಬೆಂಗಳೂರು:  ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಜೆಡಿಎಸ್ ಪಾಲಾಗಿದ್ದಕ್ಕೆ ಸಂಸದೆ ಸುಮಲತಾ ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ಅಖಾಡಕ್ಕೆ ಧುಮುಕುತ್ತಿರುದು ತಿಳಿದ ಬಳಿಕ ಸುಮಲತಾ ಅವರು ಮೌನಕ್ಕೆ ಶರಣಾಗಿದ್ದರು..

ಇನ್ನು ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಕೂಡ ಮಾಡಲಾಗಿತ್ತು. ಆದರೆ ಇದ್ಯಾವದಕ್ಕೂ ತಮ್ಮ ನಡೆ ತಿಳಿದಿದ್ದಾಗ ಜೆಪಿ ನಗರದ ನಿವಾಸದ ಮುಂದೆ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಬಳಿಕ ಬೆಂಬಲಿಗರ ಜೊತೆ ಸಭೆ ಮಾಡಿದ್ದು, ನಿಮ್ಮನ್ನ ನೋಯಿಸುವ ನಿರ್ಧಾರ ನಾನು ಮಾಡಲ್ಲ. ಏಪ್ರಿಲ್​ 3ರಂದು ಮಂಡ್ಯದಲ್ಲಿ ಸಭೆ ಮಾಡಿ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ..