Belagavi News In Kannada | News Belgaum

ಸಂಭ್ರಮದ ದಾಸೋಹ ಮೂರ್ತಿ ಅಪ್ಪನ ರಥೋತ್ಸವ

 

ಕೆಂಭಾವಿ:ಪಟ್ಟಣದ ಆರಾಧ್ಯ ದೈವ ದಾಸೋಹಿ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಶನವಾರ ನಡೆದ 26 ನೇ ರಥೋತ್ಸವ ಸಾವಿರಾರು ಭಕ್ತ ಸಮೂಹದ ಮಧ್ಯ ಸಂಭ್ರಮದಿಂದ ಜರುಗಿತು.

ಅಪ್ಪನ ರಥವನ್ನು ನಾನಾ ವಿಧದ ಬಣ್ಣ ಬಣ್ಣದ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೆ ಅನೇಕ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು. ಸಕಲ ವಾದ್ಯಮೇಳಗಳೊಂದಿಗೆ‌ ರಥಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ನಡೆಸುವುದರ ಮೂಲಕ ರಥದೋಳು ಶರಣಬಸವೇಶ್ವರರ ಮೂರ್ತಿಯನ್ನು ಕೂಡಿಸುತ್ತಿದ್ದಂತೆ ಕಳಸಾರೋಹಣ ನೆರವೇರಿತು. ನಂತರ ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸಾವಿರಾರು ಭಕ್ತಜನರ ಹರ್ಷೋದ್ಘಾರ, ಜಯಘೋಷ ಮತ್ತು ಕರತಾಡನ ಮುಗಿಲು ಮುಟ್ಟಿತು.

ನಾನಾ ಭಾಗದಿಂದ ಬಂದ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಹಾರಿಸಿ ಭಕ್ತಿಭಾವ ಸಮರ್ಪಿಸಿದರು. ಮಕ್ಕಳು ಮಹಿಳೆಯರು, ವೃದ್ದರು ಸೇರಿದಂತೆ ಸರ್ವರೂ ಹೊಸ ಬಟ್ಟೆಗಳಗಳನ್ನು ಧರಿಸಿ ಉತ್ಸಾಹದಿಂದ ದೇವಸ್ಥಾನ ಮೈದಾನದಲ್ಲಿ ಮಧ್ಯಾಹ್ನ ೪ ಗಂಟೆಯಿಂದಲೆ ಜಮಾವಣೆಗೊಂಡಿದ್ದು, ಸಂಜೆ 6 ಗಂಟೆಗೆ ನಡೆದ ಅಪ್ಪನ ರತೋತ್ಸವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ರಥೋತ್ಸವದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದಾಸೋಹ ಮೂರ್ತಿ ದರ್ಶನ ಪಡೆದು ತೇರಿಗೆ ಈಡುಗಾಯಿ ಒಡೆದು ಹರಕೆ ತೀರಿಸಿದರು.