Belagavi News In Kannada | News Belgaum

ಐಪಿಒʼ ಅನುಮತಿಗೆ ಇಕೋಸ್ (ಇಂಡಿಯಾ) ಮೊಬಿಲಿಟಿ ಪ್ರಸ್ತಾವನೆ ಸಲ್ಲಿಕೆ

ಹುಬ್ಬಳ್ಳಿ :  ಕಾರ್ಪೊರೇಟ್‌ ಕಂಪನಿಗಳಿಗೆ ಚಾಲಕಸಹಿತ ಬಾಡಿಗೆ ವಾಹನ ಸೌಲಭ್ಯ
ಒದಗಿಸುವ ಭಾರತದ ಅತಿದೊಡ್ಡ ಮತ್ತು ಲಾಭದಾಯಕ ಸಂಸ್ಥೆಯಾಗಿರುವ ಇಕೋಸ್ (ಇಂಡಿಯಾ)
ಮೊಬಿಲಿಟಿ ಆ್ಯಂಡ್‌ ಹಾಸ್ಪಿಟ್ಯಾಲಿಟಿ ಲಿಮಿಟೆಡ್ , ಪ್ರಾಥಮಿಕ ಮಾರುಕಟ್ಟೆಯಿಂದ
ಬಂಡವಾಳ ಸಂಗ್ರಹಿಸಲು ಅನುಮತಿ ನೀಡಬೇಕು ಎಂದು  ಭಾರತದ ಷೇರು ನಿಯಂತ್ರಣ ಮಂಡಳಿಗೆ
(ಸೆಬಿ) ಕರಡು ಪ್ರಸ್ತಾವ ಸಲ್ಲಿಸಿದೆ.

ಕಾರ್ಯಾಚರಣೆಗಳಿಂದ ಗಳಿಸಿದ ವರಮಾನ ಮತ್ತು ಹಣಕಾಸು 2023ರಲ್ಲಿ  ತೆರಿಗೆ ಪಾವತಿ
ನಂತರದ ಲಾಭದ ಲೆಕ್ಕಾಚಾರದಲ್ಲಿ  ಇದೊಂದು ಲಾಭದಾಯಕ ಕಂಪನಿಯಾಗಿದೆ.  ತಲಾ ₹ 2
ಮುಖಬೆಲೆಯ  1,80,00,000 ವರೆಗಿನ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ  ಕೊಡುಗೆಗೆ
(ಐಪಿಒ)  ಅನುಮತಿ ನೀಡಲು ʼಸೆಬಿʼಗೆ ಕರಡು ಪ್ರಸ್ತಾವ ಸಲ್ಲಿಸಿದೆ.

ರಾಜೇಶ್ ಲೂಂಬಾ, ಆದಿತ್ಯ ಲೂಂಬಾ, ರಾಜೇಶ್ ಲೂಂಬಾ ಫ್ಯಾಮಿಲಿ ಟ್ರಸ್ಟ್ ಮತ್ತು ಆದಿತ್ಯ
ಲೂಂಬಾ ಫ್ಯಾಮಿಲಿ ಟ್ರಸ್ಟ್ ಈ ಕಂಪನಿಯ ಪ್ರವರ್ತಕರಾಗಿದ್ದಾರೆ.

ಈ ಕೊಡುಗೆಯು ರಾಜೇಶ್ ಲೂಂಬಾ ಅವರ 99,00,000 ವರೆಗಿನ ಈಕ್ವಿಟಿ ಷೇರುಗಳು ಮತ್ತು
ಆದಿತ್ಯ ಲೂಂಬಾ ಅವರ 81,00,000 ವರೆಗಿನ  ಸೇರಿದಂತೆ 1,80,00,000 ಈಕ್ವಿಟಿ ಷೇರುಗಳ
ಮಾರಾಟ ಕೊಡುಗೆ  ಒಳಗೊಂಡಿದೆ.

ಕಂಪನಿಯು 25 ವರ್ಷಗಳಿಂದ ಭಾರತದಲ್ಲಿ ಫಾರ್ಚೂನ್ 500 ಕಂಪನಿಗಳು ಸೇರಿದಂತೆ ತನ್ನೆಲ್ಲ
ಕಾರ್ಪೊರೇಟ್ ಗ್ರಾಹಕರಿಗೆ ಚಾಲಕ ಸಹಿತ ಕಾರ್‌ ಬಾಡಿಗೆ  (ಸಿಸಿಆರ್‌) ಮತ್ತು ಉದ್ಯೋಗಿ
ಸಾರಿಗೆ ಸೌಲಭ್ಯದ (ಇಟಿಎಸ್‌) ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ವಿವಿಧ ಬಗೆಯ
ವಾಹನ  ಬ್ರ್ಯಾಂಡ್‌ಗಳಾದ ಔಡಿ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್-ಬೆಂಜ್‌  ಸೇರಿದಂತೆ
9,000 ಕ್ಕೂ ಹೆಚ್ಚಿನ ಅಗ್ಗದ, ಐಷಾರಾಮಿ ಹಾಗೂ ಪ್ರೀಮಿಯಂ ವಾಹನ, ವಿವಿಧ ಬಗೆಯ
ಕಾರ್‌, ಮಿನಿ ವ್ಯಾನ್‌ ಮತ್ತು ಬಸ್‌ಗಳ ಸೇವೆ ಒದಗಿಸುತ್ತಿದೆ.   ಇದು ವಿಶೇಷ
ವಾಹನಗಳಾದ ಲಗೇಜ್ ವ್ಯಾನ್‌ಗಳು, ಹೆಚ್ಚು ಆರಾಮದಾಯಕ ದೊಡ್ಡ ಕಾರ್‌, ಹಳೆಯ ಕಾರುಗಳು
ಮತ್ತು ಅಂಗವಿಕಲರು ಸುಲಭವಾಗಿ ಹತ್ತಬಹುದಾದ ಸಾರಿಗೆ ವಾಹನಗಳನ್ನು ಒದಗಿಸುತ್ತದೆ.

ಕಂಪನಿಯು ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳು,
ಸಲಹಾ, ಆರೋಗ್ಯ, ಇ-ಕಾಮರ್ಸ್, ಔಷಧ, ಕಾನೂನು ಮತ್ತು ತಯಾರಿಕೆ ವಲಯಗಳು ಸೇರಿದಂತೆ
ವೈವಿಧ್ಯಮಯ ಉದ್ದಿಮೆಗಳಿಗೆ ಸೇವೆ ಒದಗಿಸುತ್ತಿದೆ. ಈ ಎಲ್ಲ ವಲಯಗಳ ಪ್ರಮುಖ
ಕಂಪನಿಗಳಾದ ಎಚ್‌ಸಿಎಲ್‌ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್, ಎಚ್‌ಡಿಎಫ್‌ಸಿ ಲೈಫ್
ಇನ್ಶುರನ್ಸ್‌ ಲಿಮಿಟೆಡ್‌, ಥಾಮಸ್‌ ಕುಕ್‌,  ಡಬ್ಲ್ಯುಎಂ ಗ್ಲೋಬಲ್‌ ಟೆಕ್ನಾಲಜಿ
ಸರ್ವಿಸಸ್‌  ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ವಿಆರ್‌ಬಿ ಕನ್ಸುಮರ್‌ ಪ್ರಾಡಕ್ಟ್ಸ್‌
ಲಿಮಿಟೆಡ್‌, ಮೆಡ್‌ಜೆನೊಮ್‌ ಲ್ಯಾಬ್ಸ್‌ ಲಿಮಿಟೆಡ್‌, ಡ್ರೀಮ್‌ಫೋಕ್ಸ್‌ ಸರ್ವಿಸಸ್‌
ಲಿಮಿಟೆಡ್‌, ಮೆರ್ಸರ್‌ ಕನ್ಸಲ್ಟಿಂಗ್‌, ಎಫ್‌ಎನ್‌ಎಫ್‌ ಇಂಡಿಯಾ ಪ್ರೈವೇಟ್‌
ಲಿಮಿಟೆಡ್‌, ಎಕ್ಸೆಲ್‌ಸರ್ವಿಸ್‌ಡಾಟ್‌ಕಾಂ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಮತ್ತು
ವಿಎ ಟೆಕ್‌ ವಾಬ್ಯಾಗ್‌ ಲಿಮಿಟೆಡ್‌  ಸೇರಿದಂತೆ ಹಲವಾರು ಕಂಪನಿಗಳಿಗೆ    ತನ್ನ
ಸೇವೆಗಳನ್ನು ಒದಗಿಸುತ್ತದೆ.

ಈಕ್ವೈರಸ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಮತ್ತು ಐಐಎಫ್‌ಎಲ್‌ ಸೆಕ್ಯುರಿಟೀಸ್
ಲಿಮಿಟೆಡ್ ಈ  ನೀಡಿಕೆಯ  ಬುಕ್‌ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿವೆ.