Belagavi News In Kannada | News Belgaum

ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್

ಬೆಳಗಾವಿ ಲೋಕಸಭಾ ಕ್ಷೇತ್ರದ ಗೋಕಾಕನಲ್ಲಿ ಶಾಸಕರಾದ  ರಮೇಶ ಜಾರಕಿಹೊಳಿ ಹಾಗೂ  ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಪಕ್ಷ ಸಂಘಟನೆ ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು  ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಚರ್ಚಿಸಿದ್ದಾರೆ.

ಇದೇ ವೇಳೆ ವಿವಿಧ ಜನಪರ ಯೋಜನೆಗಳನ್ನು ದೇಶದ ಜನರಿಗೆ ನೀಡುವ ಮೂಲಕ ವಿಕಸಿತ ಭಾರತಕ್ಕಾಗಿ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಗಲಿರುಳು ಶ್ರಮಿಸೋಣ ಎಂದು ಸಂಕಲ್ಪ ಮಾಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ  ಅನಿಲ ಬೆನಕೆ, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಮಂಡಲ ಅಧ್ಯಕ್ಷ  ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ  ಭೀಮಶಿ ಬರಮಪ್ಪಗೋಳ ಸೇರಿದಂತೆ ಸ್ಥಳೀಯ ನಾಯಕರು, ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಕಸಿತ ಭಾರತ- ವಿಕಸಿತ ಬೆಳಗಾವಿ

#ಮತ್ತೊಮ್ಮೆ_ಮೋದಿಜೀ_ಸರ್ಕಾರ
#ಬೆಳಗಾವಿ_ಲೋಕಸಭಾ_ಕ್ಷೇತ್ರ ಅಭ್ಯರ್ಥಿ ಜಗದೀಶ್ ಶೆಟ್ಟರ್ ಘೋಷಣೆಯೊಂದಿಗೆ ಮತದಾರರನ್ನು ಭೇಟಿ ಮಾಡಿದರು