Belagavi News In Kannada | News Belgaum

ಮೇ, ಜೂನ್ ತಿಂಗಳಲ್ಲಿ ಸ್ಥಿರಾಸ್ತಿಗಳ ತೆರಿಗೆ ಪಾವತಿಸಲು ಅವಕಾಶ

ಬೆಳಗಾವಿ, ಏ.01 : 2024-25ರ ಸಾಲಿನ ಪೀನರವಾಡಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕಟ್ಟಡ ಹಾಗೂ ಖಾಲಿ ನಿವೇಶನ ಮಾಲೀಕರಿಗೆ ಅಥವಾ ಅನುಭೋಗದಾರರು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಮೇಲೆ ಶೇ.25 ರಷ್ಟು ಏ.1 ರಿಂದ ವಿಧಿಸಿ ತೆರಿಗೆ ಪರಿಷ್ಕರಣೆ ಮಾಡಿ ಮಂಜೂರು ಪಡೆಸಲಾಗಿದೆ.
ಕರದಾತರು ತಮ್ಮ 2024-25ನೇ ಸಾಲಿನ ಆಸ್ತಿ ತೆರಿಗೆ ಎಪ್ರಿಲ್ ತಿಂಗಳಿನಲ್ಲಿ ಪಾವತಿಸಿದರೆ ಆಸ್ತಿ ತೆರಿಗೆ ಮೇಲೆ ಶೇಕಡಾ 5% ರಷ್ಟು ರಿಯಾಯಿತಿ ನೀಡಲಾಗಿರುತ್ತದೆ. ಕರದಾತರು ಮೇ ಮತ್ತು ಜೂನ್ ತಿಂಗಳಲ್ಲಿ ದಂಡ ರಹಿತ ಆಸ್ತಿ ತೆರಿಗೆ ತುಂಬಲು ಅವಕಾಶ ನೀಡಲಾಗಿದೆ.
ಸದರಿ ಕರದಾತರು ತಮ್ಮ ಆಸ್ತಿಯ ಮೇಲೆ ದಂಡ ರಹಿತವಾಗಿ ತೆರಿಗೆ ಪಾವತಿ ಮಾಡಲು ಜೂ.30 ರವರೆಗೆ ಕಾಲವಾಶವಿದೆ. ಜು.1 ನಂತರ ಪ್ರತಿ ತಿಂಗಳಿಗೆ ಶೇಕಡಾ 2 ರಷ್ಟು ದಂಡದೊಂದಿಗೆ ಪಾವತಿ ಮಾಡಬೇಕಾಗಿದೆ.
ಎಲ್ಲಾ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಕುರಿತು ಪೀರನವಾಡಿ ಪಟ್ಟಣ ಪಂಚಾಯತಿ ಕಚೇರಿಗೆ ಸಂಪರ್ಕಿಸಿ ಸ್ವಯಂ ಘೋಷಿತ ಆಸ್ತಿಯ ಮಾಹಿತಿಯನ್ನು ತಿಳಿದುಕೊಂಡು ಆಸ್ತಿ ತೆರಿಗೆ ಪಾವತಿ ಮಾಡಬೇಕು ಎಂದು ಪೀರನವಾಡಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.